ಕರೋನಾ ವಾರಿಯರ್ಸ ಸೇವೆ ಅವಿಸ್ಮರಣೀಯ : ಬಸವರಾಜ ತೋಟದ್

0
53

ಶಹಾಬಾದ: ಪ್ರಸ್ತುತ ದಿನಗಳಲ್ಲಿ ವಿಶ್ವೆವೇ ಕರೋನಾದಿಂದ ತತ್ತರಿಸುತ್ತಿರುವ ಈ ಸಂಧರ್ಭದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯವರ ಕಾರ್ಯ ಅವಿಸ್ಮರಣಿಯ ಅವರನ್ನು ನಾವೆಲ್ಲರೂ ಅಭಿನಂದಿಸುತ್ತಿರುವುದು ನಮ್ಮ ಸೌಭಾಗ್ಯವೇ ಸರಿ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಬಸವರಾಜ ತೋಟದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತಾಲೂಕಿನ ದೇವನ ತೆಗನೂರಿನ ಗಣೇಶ ಮಂದಿರದ ಆವರಣದಲ್ಲಿ ಶ್ರೀ ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ ವತಿಯಿಂದ ಕರೋನಾ ವಾರಿಯರ್ಸಗೆ ಹಾಗೂ ಜಾನಪದ ಕಲಾವಿದರಿಗೆ ಆಯೋಜಿಸಲಾದ ಸನ್ಮಾನ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.

Contact Your\'s Advertisement; 9902492681

ವಿಶ್ವವೇ ಕರೋನಾ ಭಯದಿಂದ ನರಳುತ್ತಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ತಮ್ಮ ಜೀವದ ಹಂಗನ್ನು ತೊರೆದು ಕಾರ್ಯನಿರ್ವಹಿಸಿದ್ದಾರೆ. ಪ್ರತಿಯೊಂದು ಓಣಿಯಲ್ಲಿ ಸಂಚರಿಸಿ ಸುರಕ್ಷತೆಯ ನಿಯಮಗಳನ್ನು ನೀಡುತ್ತಾ ಪ್ರತಿಯೊಬ್ಬರಿಗೆ ಕೌನ್ಸಿಲಿಂಗ್ ಮಾಡುವುದರ ಮೂಲಕ ಅನುಪಮವಾದ ಸೇವೆಯನ್ನು ಸಲ್ಲಿಸಿದ್ದಾರೆ. ಆದ ಕಾರಣ ಅವರನ್ನು ಗೌರವಿಸುವುದು ನಮ್ಮ ಸೌಭಾಗ್ಯವೇ ಸರಿ. ನಾವು ನಮ್ಮ ಕುಟುಂಬದ ಸೌಖ್ಯವನ್ನೇ ಬಯಸಿದೇವೇಯೇ ಹೊರತು ಸಮಾಜ ಕ್ಷೇಮವನ್ನು ಬಯಸಲಿಲ್ಲ. ಸಮಾಜಮುಖಿ ಕಾರ್ಯ ಮಾಡಿದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಅಭಿನಂದನೆಗೆ ಅರ್ಹರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಶಿವಯೋಗೇಶ್ವರ ರೈತ ಆಸಕ್ತ ಸಂಘದ ಅಧ್ಯಕ್ಷ ಅಪ್ಪಾಸಾಬ ಸರಡಗಿ, ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ ಕಾರ್ಯದರ್ಶಿ ಮಹೇಶ ದೇವಣಿ, ಆಶಾಕಾರ್ಯಕರ್ತೆ ಕವಿತಾ ಕಾಶಿರಾಯ ಹೂಗಾರ, ರೈತ ಸಂಘದ ಸದಸ್ಯರಾದ ಹಣಮಂತ ಶಂಕರವಾಡಿ, ಬಸವಕುಮಾರ ಮಕಾಶಿ, ಸರಸ್ವತಿ ದೇವಣಿ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಕವಿತಾ ಕಾಶಿರಾಯ, ಕವಿತಾ ಕಾಂಬಳೆ, ಶ್ರೀದೇವಿ ಸೋಲಾಪೂರ,ರುದ್ರಮ್ಮ ಕಟ್ಟಿಮನಿ, ಅನುಸುಬಾಯು ಹೋಳಿ,ರಾಣಮ್ಮ ಮೂಲಿಮನಿ,ಅನುರಾದ ಬಳ್ಳುರಗಿ, ಲಲಿತಾಬಾಯಿ ಬಿರಾದಾರ ಇವರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here