ಓದುವ ಸಂಸ್ಕೃತಿ ಬೆಳೆಸಿದ್ದು ತಿಳಗೂಳ: ಆನೆಗೊಂದಿ

0
41

ಶಹಾಪುರ: ತಾಲ್ಲೂಕಿನಲ್ಲಿ ಜ್ಞಾನದ ಭಂಡಾರವನ್ನೇ ತೆರೆದಿಟ್ಟು ಪ್ರತಿಯೊಬ್ಬರಿಗೂ ಓದುವ ಸಂಸ್ಕೃತಿಯನ್ನು ಬೆಳೆಸಿದ್ದು ರಘುನಾಥ ರಾವ್ ತಿಳಗೂಳ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ತಿಳಿಸಿದರು.

ಶಹಾಪುರ ನಗರದ ದೇಶ್ಮುಖ್ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಸಾಹಿತಿ ಸಂಗಣ್ಣ ಹೋತಪೇಟ ಹಾಗೂ ರಘುನಾಥರಾವ್ ತಿಳಗೂಳವರ ಭಾವಪೂರ್ಣ ಶೃದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಸೃಜನಶೀಲ ಹಾಗೂ ಕ್ರಿಯಾಶೀಲರಾಗಿದ್ದ ರಘುನಾಥ ರಾವ್ ತಿಳಗೂಳ ಅವರು ಸುಮಾರು 40 ವರ್ಷಗಳಿಂದ ಪತ್ರಿಕಾ ವಿತರಕರಾಗಿ ನಿಸ್ವಾರ್ಥ ಸೇವೆ ಮಾಡಿದ್ದಾರೆ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಅವರನ್ನು ಬಣ್ಣಿಸಿದರು.

ಖ್ಯಾತ ಕಥೆಗಾರ ಸಿದ್ಧರಾಮ ಹೊನ್ಕಲ್ ಮಾತನಾಡಿ ಸಂಗಣ್ಣ ಹೊತಪೇಟೆ ಅವರು ಶಿಕ್ಷಕರಾಗಿ ಸೃಜನಶೀಲ ಬರಹಗಾರರಾಗಿ ಬಹುಭಾಷಾ ಸಾಹಿತಿಗಳಾಗಿ ಉತ್ತಮವಾದ ಕೃತಿಗಳನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ ಎಂದು ಹೇಳಿದರು.ಅಲ್ಲದೆ ಯಾವುದೇ ಆಡಂಬರಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವುದು ವಿಶೇಷತೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ ದೊಡ್ಡಬಸಪ್ಪ ಬಳೂರಗಿ ಮೊನಪ್ಪ ಶಿರವಾಳ ವಿಶ್ವಾರಾಧ್ಯ ಸತ್ಯಂಪೇಟೆ ಬಸವರಾಜ ಹಿರೇಮಠ ಬಸವರಾಜ ಅರುಣಿ ಮಾರ್ಥಂಡಪ್ಪ ಶಿರವಾಳ,ಗುರುಬಸಯ್ಯ ಗದ್ದುಗೆ ಗುರುರಾಜ್ ಗಳೂರಿಗೆ ಸಣ್ಣನ ನಾಯಿಕೋಡಿ ಹೊನ್ನಾರೆಡ್ಡಿ ಅಶೋಕ್ ಚೌಧರಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಸವರಾಜ ಸಿನ್ನೂರ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here