ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

0
51

ಕೋಲಾರ: ಜಿಲ್ಲೆ ಮತ್ತು ತಾಲೂಕಿನ ನರಸಾಪುರ ಗ್ರಾಮದಲ್ಲಿ ಇರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2000-2003ನೇ ಸಾಲಿನ ವಿದ್ಯಾರ್ಥಿಗಳ ವತಿಯಿಂದ ಇಂದು ಗುರುವಂದನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಅದ್ದೂರಿಯಾಗಿ ನಡೆಸಲಾಯಿತು. ಮತ್ತು 2000-2003ನೇ ಸಾಲಿನ ವಿದ್ಯಾರ್ಥಿಗಳಿಂದ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷಕ ವೃಂದದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

Contact Your\'s Advertisement; 9902492681

ಗುರುಗಳನ್ನು ಗೌರವಿಸುವ ಗುರುವಂದನಾ ಕಾರ್ಯಕ್ರಮ ಒಂದು ಸತ್ಸಂಪ್ರದಾಯ. ಗುರು-ಶಿಷ್ಯರ ಬಾಂಧವ್ಯ ಸ್ಥಿರವಾಗಿ ಮುಂದುವರೆಯಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಶ್ರೀನಿವಾಸ್ ರವರು ತಿಳಿಸಿದರು.  ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ 2000-2003ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುರು ಪರಂಪರೆಯನ್ನು ಗೌರವಿಸುವ ಗುರುವಂದನೆ ಎಂಬ ವಿನೂತನ ಕಾರ್ಯಕ್ರಮವು ಭಾರತೀಯ ಮೌಲ್ಯ ಪ್ರತಿಪಾದಕವಾಗಿದೆ. ಪರಿಸರ ಕಾಳಜಿ. ಹಿರಿಯರ ಆದರ್ಶ. ರಾಷ್ಟ್ರಪ್ರೇಮ. ಪರಂಪರೆಯ ಅರಿವು. ಸಾಮಾಜಿಕ ಬದ್ಧತೆ. ಶಿಸ್ತು. ಸಾಮಾಜಿಕ ಕಳಕಳಿ. ಸಾರ್ವಜನಿಕ ಆಸ್ತಿಯ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಮೈ ಗೊಡಿಸಿಕೊಂಡಲ್ಲಿ ಯಾವುದೇ ಉದ್ಯೋಗ. ವ್ಯಾಪಾರ ವಹಿವಾಟನ್ನು ನಡೆಸಿದರೂ ಮಾದರಿಯಾಗುತ್ತೀರಿ ಎಂದು ತಿಳಿಸಿದರು.

ಕುಸುಮ ರವರು ಮಾತನಾಡಿ ಶಿಷ್ಯರು ಉತ್ತಮ ನಾಗರಿಕರಾಗುವುದೇ ಗುರುವಿಗೆ ನೀಡುವ ಉನ್ನತ ಕಾಣಿಕೆ ಎಂದು ಹೇಳಿದರು. ಗುರುವಂದನೆ ಸಲ್ಲಿಸುವ ಜತೆಗೆ ಸ್ನೇಹಿತರು ಸಮಗಮಗೊಂಡಿರುವ ಕಾರ್ಯಕ್ರಮ ಅವಿಸ್ಮರಣೀಯ ಎಂದರು.  ಕುಮಾರ್ ರವರು ಮಾತನಾಡಿ ಹಿಂದಿನ ಶಿಕ್ಷಣ ಹಾಗೂ ಇಂದಿನ ಶಿಕ್ಷಣದ ವ್ಯವಸ್ಥೆಗಳು ಬದಲಾದಂತೆ ವಿದ್ಯಾರ್ಥಿಗಳು ಹಾಗೂ ಗುರುಗಳ ಮಧ್ಯೆ ಕೂಡ ಅಂತರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಗುರುವಂದನಾ ಕಾರ್ಯಕ್ರಮವನ್ನು ನಡೆಸಿರುವುದು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು.  ಇಂದಿನ ಕಾರ್ಯಕ್ರಮ ಎಲ್ಲಾ ಉಪನ್ಯಾಸಕರಿಗೆ ಗೌರವ ತಂದಿದೆ. ನಮ್ಮ ವಿದ್ಯಾರ್ಥಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಾಗಿ ತಿಳಿಸಿದರು.

ಭಾರತ ಸಂಸ್ಕೃತಿಯಲ್ಲಿ ಗುರು ಶಿಷ್ಯ ಪರಂಪರೆ ಮಹತ್ವವನ್ನು ಪಡೆದುಕೊಂಡಿದೆ. ಗುರುಗಳಿಗೆ ಗೌರವ. ಪೂಜ್ಯ ಭಾವನೆ ಇತ್ತು. ಜತೆಗೆ ಗುರುವನ್ನು ದೇವರ ಸಮಾನ ಎಂದು ಪೂಜಿಸಿದ್ದ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ವಿದ್ಯಾರ್ಥಿಗಳ ಕಾರ್ಯ ಮಹತ್ವವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ್. ಬಿ.ಎನ್.ಎಸ್. ಕುಸುಮ(ಆರ್ ಎನ್). ಮೆರೀನಾ. ಮಂಜುಳಾ. ಕುಮಾರ್( ಕೆ.ಕೆ). ವಿದ್ಯಾರ್ಥಿಗಳಾದ ಎಂ.ಮುರಳಿ. ಜಯಂತ್. ರಮೇಶ್. ಸಿ.ಎಂ ನಾಗೇಶ್. ಮುನಿರಾಜ್. ಮಂಜುಳಾ. ಸುಮಿತ್ರ. ಶ್ವೇತಾ. ಅಶ್ವಿನಿ. ಪುಷ್ಪ. ನಾಗರತ್ನ. ಹಸೀನಾ. ಸರಸ್ವತಿ. ಪ್ರಮೀಳಾ. ಹಾಗೂ ಎಲ್ಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here