ಕಲಬುರಗಿ: ಉತ್ತರ ಪ್ರದೇಶದ ಹಾಥರಾಸ ಮತ್ತು ಬಲರಾಮಪುರದಲ್ಲಿ ಮನೀಷಾ ಮತ್ತು ವಿಮಲಾಳ ಎಂಬಯುವತಿಯರನ್ನು ಸಾಮುಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳಿಗೆ ತ್ವರಿತ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ರಿಪಬ್ಲಿಕನ್ ಯೂಥ್ ಫೆಡರೆಷನ ಕಲಬರಗಿ, ಮಾನವ ಬಂಧುತ್ವ ವೇದಿಕೆ ಹಾಗೂ ಎ.ಪಿ.ಐ ಕಲಬುರಗಿ ವತಿಯಿಂದ ಕೋರ್ಟ್ ಸರ್ಕಲ್ ನಿಂದ ಸರ್ದಾರ್ ಪಟೇಲ್ ಸರ್ಕಲ್ ವರೆಗೆ ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳವಾಯಿತು.
ಈ ವೇಳೆ ಮಾತನಾಡಿದ ರಿಪಬ್ಲಿಕನ್ ಯೂಥ್ ಫೆಡರೆಷನ ಸಂಚಾಲಕ ಹನುಮಂತ ಇಟಗಿ, ಉತ್ತರ ಪ್ರದೇಶದ ಪರಿಶಿಷ್ಟ ಜಾತಿಯ ಮನಿಷಾ ಮತ್ತು ವಿಮಲಾಳನ್ನು ಅಮಾನುಷ್ಯವಾಗಿ ಗ್ಯಾಂಗ ರೇಪ್ ಮಾಡಿ ಬರ್ಬರ ಹತ್ಯೆ ಮಾಡಿರುದನ್ನು ತಡೆಯಲು ವಿಫಲವಾಗಿರುವ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೈತಿಕ ಹೊಣೆ ಹೊತ್ತು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಈ ಎರಡು ಘಟನೆಗೆ ಸಂಬಂಧಪಟ್ಟಂತೆ ಅಲ್ಲಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ, ಸೂಕ್ತ ಚಿಕಿತ್ಸೆ ನೀಡದ ವೈದ್ಯರು ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು ಮತ್ತು ಅವರನ್ನು ಸೇವೆಯಿಂದ ವಜಾಮಾಡಬೇಕು ಎಂದು ಆಗ್ರಹಿಸಿದರು.
ರಿಪಬ್ಲಿಕನ್ ಯೂಥ್ ಫೆಡರೆಷನ ಗೌರವ ಸಂಚಾಲಕರಾದ ಸಂತೋಷ ಮೇಲ್ಮನಿ ಮಾತನಾಡಿ, ಹಾಥರಾಸ ಮತ್ತು ಬಲರಾಮಪೂರ ಗ್ಯಾಂಗ ರೇಪ್ ಮಾಡಿ ಬರ್ಬರ ಹತ್ಯೆ ಮಾಡಿದ ಆರೋಪಿಗಳ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಂಡು ತ್ವರಿತ ಗತಿಯಲ್ಲಿ ಮರಣದಂಡನೆ ವಿಧಿಸಬೇಕು. ಮತ್ತು ಮನಿಷಾ ಮತ್ತು ವಿಮಲಾಳ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು. ಮನಿಷಾ ಹಾಗೂ ವಿಮಲಾಳ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ತಲಾ ಎರಡೇರಡು ಕೋಟಿ ರೂಪಾಯಿ ಸಹಾಯಧನ ನೀಡಿ ಕುಟುಂಬ ಓರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು. ಎರಡೂ ಪ್ರಕರಣಗಳನ್ನು ಉತ್ತರ ಪ್ರದೇಶದಿಂದ ಬೇರೆ ರಾಜ್ಯಗಳಲ್ಲಿ ವರ್ಗಾಯಿಸಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದರು.
ಈ ಕೂಡಲೇ ನಮ್ಮ ಮನವಿಯನ್ನು ಪರಿಗಣಿಸಿ ಅತ್ಯಾಚಾರ ಮಾಡಿದ ಹಾಗೂ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಎಲ್ಲಾ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಕ್ಯಾಂಡಲ್ ಮಾರ್ಚ ಮಾಡುವ ಮುಖಾಂತರ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ನಾಗೇಂದ್ರ ಕೆ. ಜವಳಿ, ಧರ್ಮಣ್ಣ ಕೊಣೆಕರ, ಲಕ್ಷ್ಮೀಕಾಂತ ಬಾಲಾಜಿ, ಸಿದ್ಧಾರ್ಥ್ ಚಿಂಚನಸೂರ, ಅರುಣ ಸಾಗರ, ಬಾಲಾಜಿ ಚಿತ್ತೇಕರ್, ರಾಣು ಮುದ್ದನಕರ್, ಶಿವಕುಮಾರ ಜಾಲವಾದ, ರತನ್ ಕನ್ನಡಗಿ, ಅಂಬರೀಶ್ ಅಂಬಲಗಿ, ಶ್ರವಣ ಖಜನದಾರ, ಅಜಯ ಕೋರಳ್ಳಿ, ವಿನೋದ ಕಾಂಬಳೆ, ಲವಕುಶ್ ಕಡಗಂಚಿ ದಿನೇಶ್ ಸುತಾರ, ಶಶಿ ಆಲೂರಕರ್, ಉಮೇಶ ಶ್ರೀಂಗೇರಿ, ಮಲ್ಲಿಕಾರ್ಜುನ ಹೊಸಮನಿ, ಮಲ್ಲಿಕಾರ್ಜುನ ಬೆಲಸೂರ್, ಶರಣು ಸುತಾರ, ದಶರಥ ತಳಕೇರಿ ಸೇರಿದಂತೆ ಇತರರು