ಕಲಬುರಗಿ: ಕನಾ೯ಟಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ರಾಜಕಿಯ ದುರುದ್ದೇಶದಿಂದ ಬಿ.ಜೆ.ಪಿ ನಡೆಸಿರುವ CBI ದಾಳಿಯನ್ನು ಖಂಡಿಸಿ ಕಲಬುರಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಈರಣ್ಣ ಝಳಕಿ ಅವರು ನೇತ್ರತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯ ಎದುರು ಪ್ರತಿಭಟನೆಯನ್ನು ನಡೆಸಲಾಯಿತು.
ಈ ವೇಳೆಯಲ್ಲಿ ಪಕ್ಷದ ಮುಖಂಡರಾದ ಮಜರ ಆಲಮ್ ಖಾನ, ಶಕಿಲ ಸರಡಗಿ, ಜಮಿಲ, ಖಾಲಿಕ ಆಹಮದ, ಸಾಜಿದ ಆಲಿ ರಂಜೋಳವಿ, ಸೇರಿದಂತೆ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರು ಮತ್ತು ಕಾರ್ಯಾಕರ್ತರು ಇದ್ದರು.