ಸುರಪುರ: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಭಾವೈಕ್ಯತೆಯ ಹರಿಕಾರ ತಾಲೂಕಿನ ಸುಕ್ಷೇತ್ರ ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ಪುರುಷೋತ್ತಮ ಮಾಸ (ಮಲಮಾಸ) ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಅಕ್ಟೋಬರ್ ೮ರಂದು (ಗುರುವಾರ) ರುದ್ರ ಹೋಮ ಮತ್ತು ಮೌನೋದ್ದಿನ್ ಮಜಾರಿಗೆ ಗಂಧ ಲೇಪನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ಸುಪ್ರಭಾತ ನಂತರ ೭.೩೦ಕ್ಕೆ ಗಂಗಾ ಪೂಜೆ (ಕೃಷ್ಣಾ ಬಾಗಿನ ಸಮರ್ಪಣೆ), ಗಣಪತಿ ಪೂಜೆಯೊಂದಿಗೆ ಪುಣ್ಯಾಹ, ಶ್ರೀ ಮೌನೇಶ್ವರ ಮೂರ್ತಿಗೆ ಪಂಚಾಮೃತ ಅಭಿಷೇಕ ಷೋಡೋಪಚಾರ ಪೂಜೆ ಮತ್ತು ಮೌನೋದ್ದಿನ್ ಮಜಾರಿಗೆ ಗಂಧಲೇಪನ, ಪಂಚಬ್ರಹ್ಮ, ನವಗ್ರಹ, ದಿಕ್ಪಾಲಕ ಹಾಗೂ ರುದ್ರಹೋಮ, ಜಯಾಧಿಪ್ರಾಯಶ್ಚಿತ್ತ ಹೋಮ ಅಷ್ಟದಿಕ್ಪಾಲಕ ಹಾಗೂ ಕ್ಷೇತ್ರಪಾಲಕ ಬಲಿ, ಪೂರ್ಣಾಹುತಿ ನಂತರ ಮಹಾ ಮಂಗಳಾರುತಿ ಮತ್ತು ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮಗಳು ನೆರವೇರಲಿವೆ ಎಂದು ಆಯೋಜಕರಾದ ದೇವಸ್ಥಾನದ ಸದ್ಭಕ್ತಾದಿಗಳು ಹಾಗೂ ಗ್ರಾಮಸ್ಥರ ಕಮೀಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.