ಭೂಸ್ವಾಧೀನ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

0
36

ನಾಗಮಂಗಲ: ತಾಲೂಕಿನ ಬೆಳ್ಳೂರು ಹೋಬಳಿಯ ಹಟ್ನ, ಗರುಡನಹಳ್ಳಿ, ಬೈರಸಂದ್ರ, ಬಿಳಗುಂದ ಸೇರಿದಂತೆ ಹಲವಾರು ಗ್ರಾಮಸ್ಥರು ಕೆಐಎಡಿಬಿ 1270 ಎಕರೆ ಜಮೀನನ್ನು ಕೈಗಾರಿಕಾ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆ ಗೆ ಪಸಲು ಭೂಮಿಯನ್ನು ನೀಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ತಾಲೂಕು ಹಸಿರು ಸೇನೆ ಮತ್ತು ಕೈಗಾರಿಕಾ ಪ್ರದೇಶಕ್ಕೆ ಭೂಮಿ ಕಳೆದುಕೊಳ್ಳುತ್ತಿರುವ ರೈತರು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಬಂದ್ ಸಂಪೂರ್ಣ ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಜಮೀನು ಕಳೆದುಕೊಂಡಿರುವ ರೈತರು ಹಲವಾರು ಪ್ರತಿಭಟನೆಯನ್ನು ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ವರವರನ್ನು ಸಹ ಕರೆಸಿ ಅಹವಾಲು ಸಲ್ಲಿಸಿದ್ದು, ಶನಿವಾರ ಕೈಗಾರಿಕಾ ಮಂತ್ರಿ ಜಗದೀಶ್ ಶೆಟ್ಟರ್ ರವರನ್ನು ಸ್ಥಳೀಯ ಶಾಸಕ ಸುರೇಶ್ ಗೌಡ ರೊಂದಿಗೆ ಬೇಟಿ ಮಾಡಿ ಮತ್ತೊಂದು ಸರ್ವೆ ಮಾಡಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.

Contact Your\'s Advertisement; 9902492681

ಒಂದು ವಾರದ ಹಿಂದೆ ಹೆದ್ದಾರಿ ಬಂದ್ ಮಾಡುವುದಾಗಿ ಹೇಳಿಕೆ ಹೊರಬಿದ್ದ ಮೇಲೆ ಬೆಳ್ಳೂರು ಠಾಣಾ ಪಿಎಸ್ಐ ಆ ಬಾಗದ ಮುಖಂಡರನ್ನು ಭೇಟಿ ಮಾಡಿ ಹೆದ್ದಾರಿ ಬಂದ್ ಕೈ ಬಿಡಬೇಕೆಂದು ಮನವಿ ಮಾಡಿದರು ಮನವಿಗೆ ನಕಾರಾ ವ್ಯಕ್ತ ಪಡಿಸಿದ ರೈತರು ಇಂದು ಮುಂಜಾನೆಯಿಂದಲೇ ಮಹಿಳೆಯರು, ಮಕ್ಕಳು, ಹಿರಿಯರು, ಸೇರಿದಂತೆ ಸಾವಿರಾರು ಜನ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದು ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತ ಗೊಂಡಿತು.

ಸರ್ಕಾರಿ ಬಸ್ ಗಳು ಕಾರುಗಳು ಸಾಗರೋಪಾದಿಯಲ್ಲಿ ಎರಡೂ ಕಡೆಯಲ್ಲೂ ಸಾಲು ಗಟ್ಟಿ ನಿಂತಿದ್ದವು, ನೂರಾರು ಪೋಲೀಸರು ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದರು, ಸುಮಾರು ಒಂದು ಗಂಟೆಯ ನಂತರ ಪ್ರತಿಭಟನಾಕಾರರು ಒಂದು ದಾರಿಯಲ್ಲಿ ವಾಹನಗಳು ಸಾಗಲು ಅನುವು ಮಾಡಿಕೊಟ್ಟರು, ಅಲ್ಲಿಯ ತನಕ ಬೆಂಗಳೂರು ಕಡೆಗೆ ಹೋಗುವ ವಾಹನಗಳಿಗೆ ಪೋಲೀಸರೇ ಬೈರಸಂದ್ರ ಗ್ರಾಮದ ಮೂಲಕ ಹೋಗಲು ದಾರಿ ಮಾಡಿಕೊಳ್ಳಲಾಗಿತ್ತು.

ತಾಲ್ಲೂಕು ರೈತಸಂಘ, ಹಸಿರು ಸೇನೆಯ ಬೆಂಬಲ ಪಡೆದ ರೈತರು ಪ್ರತಿಭಟನೆಯುದ್ದಕ್ಕೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಿದ್ದುದು ಕಂಡು ಬಂದಿತು. ಪ್ರತಿಭಟನೆಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗಿಳಿದು ಕಳೆದ ಹದಿನೈದು ದಿನಗಳಿಂದ ರೈತರು ಹಲವಾರು ಬಾರಿ ಮನವಿ ಮಾಡಿದರೂ ಜಾಣಗಿವುಡರಂತೆ ವರ್ತಿಸುತ್ತಿರುವ ಜಿಲ್ಲಾಧಿಕಾರಿಯವರು ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಅವರು ಇಲ್ಲಿಗೆ ಬರುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಇದೊಂದು ರೈತರಿಗೆ ಬರೆದ ಮರಣ ಶಾಸನ ವಾಗಿದ್ದು ಇದನ್ನು ತಕ್ಷಣ ಕೈ ಬಿಡಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಲು ಮುಂದಾದ ತಹಸೀಲ್ದಾರ್ ಕುಂಞಿ ಅಹಮದ್ ರವರು ಜಿಲ್ಲಾಧಿಕಾರಿಯವರು ಕೋವಿಡ್ ಸಂಬಂಧಿಸಿದಂತೆ ಸಭೆಯಲ್ಲಿದ್ದು ಅವರ ಹೇಳಿಕೆಯ ಮೇರೆಗೆ ಒಂದು ವಾರದಲ್ಲಿ ಮುಖಂಡರು ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರೆಸಿದರು ವೃತ್ತ ಆರಕ್ಷಕ ನಿರೀಕ್ಷಕ ರಾಜೇಂದ್ರ ರವರು ಪ್ರತಿಭಟನಾಕಾರರನ್ನು ಬಂದ್ ಕೈ ಬಿಡುವಂತೆ ಮನವಿಗೂ ಜಗ್ಗದ ರೈತರು ಡಿಸಿ ಬರಬೇಕೆಂದು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ಸುರೇಶ್, ರಮೇಶ್, ರಜನಿ, ವಾಸು, ಬಸವರಾಜು ಸೇರಿದಂತೆ ಸಾವಿರಾರು ಮಹಿಳೆಯರು, ಮಕ್ಕಳು, ಹಾಗೂ ರೈತ ಮುಖಂಡರು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here