ಕೆಕೆಆರ್‌ಡಿಬಿ ಟೆಂಡರ್‌ಗಳಲ್ಲಿ ಅವ್ಯವಹಾರ: ಶಾಮಿಲಾದ ಅಧಿಕಾರಿಗಳ ವಜಾಕ್ಕೆ ಆಗ್ರಹ

0
105

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಟೆಂಡರಗಳಲ್ಲಿ ಅವ್ಯವಹಾರದಲ್ಲಿ ಶಾಮಿಲಾಗಿರುವ ಅಧಿಕಾರಿಗಳು ಹಾಗೂ ಇರ್ನೇಸ್ಟ್ ಆಂಡ್ ಯೇಂಗ್ ಕಂಪನಿಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಜಯ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ದಕ್ಷಿಣ ಮತ ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಮನವಿ ಸಲ್ಲಿಸಲಾಯಿತು ಎಂದು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಸ್.ಸಾರವಾಡ ತಿಳಿಸಿದ್ದಾರೆ.

ಮನವಿ ಸಲ್ಲಿಸಿ ಮಾತನಾಡಿದ ಅವರು, ಹಿಂದೂಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಸರಕಾರವು ಮಂಡಳಿಯನ್ನು ರಚಿಸಿ, ಹಿಂದೂಳಿದ ಪ್ರದೇಶವೆಂಬ ಹಣೆ ಪಟ್ಟಿಯನ್ನು ಹೊಗಲಾಡಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ವಾರ್ಷಿಕ ಕೊಟ್ಯಾಂತರ ರೂಪಾಯಿ ವಾರ್ಷಿಕ ಅನುದಾನ ನೀಡುತ್ತಿದೆ. ವಿಪರ್ಯಾಸವೆನೆಂದರೆ ಕೆಲ ಅಧಿಕಾರಿಗಳು ಸ್ವಹಿತಾಸಕ್ತಿಯಿಂದ ಬೇಜ್ವದಾರಿ ತನದಿಂದ ಅಭಿವೃದ್ದಿ ಕಾಮಗಾರಿಗಳು ಸಂಪೂರ್ಣ ನೆಲಕಚ್ಚಿದೆ ಎಂದು ಹೇಳಿದರು.

Contact Your\'s Advertisement; 9902492681

ಯಾವುದೇ ಕಾಮಗಾರಿ ಡೆಂಡರ್ ಕರೆಯುವಾಗ ಪ್ರಚಲಿತ ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ನಿಯಮ ಹಾಗೂ ಟೆಂಡರ ವೆಬ್‌ಸೈಟ್‌ನಲ್ಲಿ ಸಂಬಂಧ ಪಟ್ಟ ಮಾಹಿತಿ ನೀಡಬೇಕೆಂಬ ನಿಯಮವಿರುತ್ತದೆ ಇಲ್ಲಿನ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಯಾವುದೇ ಪತ್ರಿಕೆಗಳಲ್ಲಿ ಜಾಹೀರಾತು ನೀಡದೇ ಕೆಟಿಟಿಪಿ ಕಾಯ್ದೆ ನಿಯಮವನ್ನು ಗಾಳಿಗೆ ತೂರಿರುತ್ತಾರೆ ಎಂದು ಹೇಳಿದರು.

ಇರ್ನೇಸ್ಟ್ ಆಂಡ್ ಯೇಂಗ್ ಕಂಪನಿಯು ಮೂಲಃತ ಲೇಕ್ಕ ಪರಿಶೋಧನ ಕಂಪನಿಯಾಗಿದ್ದು, ಮತ್ತು ವಿದೇಶಿ ಮೂಲದ ಕಂಪನಿಯಾಗಿದ್ದು, ಅದಕ್ಕೆ ಪಿಎಸ್‌ಓ ತರಹದ ಕಾಮಗಾರಿ ಮಾಡಿರುವ ಯಾವುದೇ ಹಿನ್ನಲೆ ಇರುವುದಿಲ್ಲ. ಮತ್ತು ೩೭೧ (ಜೆ) ನ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಒಳಪಟ್ಟಿರುವ ಪ್ರದೇಶದ ಸಂಸ್ಥೆಗಳಿಗೆ ಮೊದಲ ಆಧ್ಯತೆಯನ್ನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.

ಕೋವಿಡ್-೧೯ ಎಂಬ ಮಹಾಮಾರಿ ರೋಗ ದೇಶದಲ್ಲಿ ತಾಂಡವಾಡುತ್ತಿರುವ ಈ ಸಮಯದಲ್ಲಿ ಅಧಿಕಾರಿಗಳು ತಮ್ಮ ಅನುಕೂಲಕ್ಕಾಗಿ ಮತ್ತು ದುಡ್ಡಿನ ಆಮಿಶ್ಯೆಗೆ ಒಳಗಾಗಿ ಅಭಿವೃದ್ದಿ ಮಂಡಳಿಯ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಅಭಿವೃದ್ದಿ ಕಾಣುವುದೆ ಹೇಗೆ ಎಂದರು.

ಇರ್ನೇಸ್ಟ್ ಆಂಡ್ ಯೇಂಗ್ ಕಂಪನಿಗೆ ೯ ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ಟೆಂಡರ್ ಅನ್ನು ನೀಡಿ ಅದರಲ್ಲಿ ಕೆಲ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಶಾಮಿಲಾಗಿ ಸರಕಾರದ ಕೊಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.

ಇರ್ನೇಸ್ಟ್ ಆಂಡ್ ಯೇಂಗ್ ಕಂಪನಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ಶಾಮೀಲಾಗಿರುವ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸದ್ದಿದ್ದರೆ ಅನಿವಾರ್ಯವಾಗಿ ರಸ್ತೆಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಲ್ಲಿಕಾರ್ಜುನ್ ಸಾರವಾಡ ಹಾಗೂ ಸಿದ್ದಲಿಂಗ ರಾಠೋಡ್ ಜಂಟಿಯಾಗಿ ತಿಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here