75 ಸಾವಿರ ಲಂಚ ಪಡೆಯುತ್ತಿದ್ದ ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿ ಎಸಿಬಿ ಬಲೆಗೆ

0
87

ಕಲಬುರಗಿ: ಹೊಸ ಕಾಲೇಜು ತೆರೆಯಲು ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ನೀಡಲು ಲಂಚದ ಹಣ ಪಡೆಯುತ್ತಿದ್ದ ವೇಳೆಯಲ್ಲಿ ಅಗ್ನಿ ಶಾಮಕ ಪ್ರಾದೇಶಿಕ ಅಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕಲಬುರಗಿ ವಿಭಾಗದ ಅಗ್ನಿಶಾಮಕ ಪ್ರಾದೇಶಿಕ ಅಧಿಕಾರಿಯಾಗಿದ್ದ ಲಕ್ಕಪ್ಪ ಈರಪ್ಪ (58) ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಹೊಸ ಕಾಲೇಜು ತೆರೆಯಲು ಅನುಮತಿಗಾಗಿ ಫೈರ್‌ ಎನ್ ಓಸಿ ಪ್ರಮಾಣ ಪತ್ರ ನೀಡಿಲು 75 ಸಾವಿರ ಲಂಚದ ಹಣದ ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ಅರ್ಜಿಯನ್ನು ಪೆಂಡಿಂಗ್ ಇಟ್ಟಿದರು ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಇಂದು ಎಸಿಬಿ ಮಹೇಶ್‌ ಮೇಘಣ್ಣವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ರೆಡ್‌ ಹ್ಯಾಂಡ್‌ ಆಗಿ ದಾಳಿ ನಡೆಸಿ ಲಂಚ ಮೊತ್ತ ವನ್ನು ವಶಪಡಿಸಿಕೊಂಡು ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here