ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ಕಾರ್ಮಿಕರು ಬಿದಿಗೆ ಬರಲಿದ್ದಾರೆ: ಶಾಸಕ ಡಾ. ಅಜಯಸಿಂಗ್

0
31

ಕಲಬುರಗಿ: ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಕೇವಲ ರೈತರಿಗೆ ಮಾತ್ರವಲ್ಲ ಅಲ್ಲಿ ಕೆಲಸ ಮಾಡುವ ಕೆಲಸಗಾರರು, ಹಮಾಲಿಗಳು ತೊಂದರೆ ಅನುಭವಿಸಲಿದ್ದಾರೆ. ರೈತರು ತಮ್ಮ ಬೆಳೆ ಹೊರಗಡೆ ಮಾರಾಟ ಮಾಡಲು ಅನುಕೂಲ ಮಾಡಿದ್ದರಿಂದ ಎಪಿಎಂ ಸಿ ಮೂಲಕ ಸಂಗ್ರಹವಾಗುತ್ತಿದ್ದ ವಾರ್ಷಿಕ 800 ಕೋಟಿ ಸೆಸ್ ಕೂಡಾ ಖೋತವಾಗಲಿದೆ ಎಂದು ಸರಕಾರ ಮುಖ್ಯ ಸಚೇತಕರಾದ ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ತಿಳಿಸಿದರು.

ಎಪಿಎಂಸಿ ಕಾಯಿದೆಯಿಂದಾಗಿ ಅಂಬಾನಿ ಅದಾನಿಯಂತ ಸಿರಿವಂತರು ಹಳ್ಳಿ ಹಳ್ಳಿಗೆ‌ಹೋಗಿ ತಮಗೆ ಸರಿಎನಿಸಿದ ಬೆಲೆಯಲ್ಲಿ ಧಾನ್ಯ ಖರೀದಿಸಲಿದ್ದಾರೆ. ಏನಾದರೂ ತೊಂದರೆಗಳನ್ನು ರೈತರು ಎದುರಿಸಿದರೆ ಬಗೆಹರಿಸಿಕೊಳ್ಳಲು ಕಾರ್ಪೋರೇಟ್ ಕಂಪನಿಗಳಿರುವ ಮುಂಬೈ ದೆಹಲಿಗೆ ಹೋಗಬೇಕಾ.? ಎಂದು ಪ್ರಶ್ನಿಸಿದರು.

Contact Your\'s Advertisement; 9902492681

ಎಪಿಎಂಸಿ ದುರ್ಬಲಗೊಂಡರೆ, ರೈತರು ಮಾರಾಟ ಮಾಡುವ ಧಾನ್ಯ ತೂಕದಲ್ಲಿ ಮೋಸವಾಗದಂತೆ ನೋಡುವವರು ಯಾರು? ಮಾರಾಟ ಮಾಡಿದ ಧಾನ್ಯಕ್ಕೆ‌ ಸರಿಯಾದ ಹಣ‌ ಸಂದಾಯ ಮಾಡುವ ಮೇಲುಸ್ತುವಾರಿ ಯಾರು ಮಾಡುತ್ತಾರೆ.? ಎಂದು‌ ಮಾಜಿ‌ಸಚಿವರಾದ‌ ಶ್ರೀ ಶರಣಪ್ರಕಾಶ್ ಪಾಟೀಲ್ ಪ್ರಶ್ನಿಸಿದರು.

ಶಾಸಕರಾದ ಖನೀಜ್ ಫಾತಿಮಾ, ಎಂಎಲ್‌ಸಿ‌ ಚಂದ್ರಶೇಖರ್,‌ ಡಿಸಿಸಿ ಅಧ್ಯಕ್ಷರಾದ ಜಗದೇವ, ಎಂಎಲ್‌ಸಿ ಅಭ್ಯರ್ಥಿ ಶರಣಪ್ಪ ಮಟ್ಟೂರು, ಗುತ್ತೇದಾರ, ಕೆ.ಬಿ.ಶಾಣಪ್ಪ, ತಿಪ್ಪಣ್ಣಪ್ಪ‌ ಕಮಕನೂರು, ಶರಣಪ್ಪ ಮಾನೇಗಾರ್,  ಸುಭಾಷ್ ರಾಠೋಡ್, ವಿಜಯಕುಮಾರ ಜಿ ರಾಮಕೃಷ್ಣ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here