ಶಿಕ್ಷಕರ ಕ್ಷೇತ್ರದ ಚುನಾವಣೆ: ಇಂದು 7 ನಾಮಪತ್ರ ಸಲ್ಲಿಕೆ

0
53

ಕಲಬುರಗಿ: ಅಕ್ಟೋಬರ್ 28 ರಂದು ನಡೆಯುವ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬುಧವಾರ ಒಟ್ಟು 7 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಗಳಾದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ಅವರು ತಿಳಿಸಿದ್ದಾರೆ.

ಬುಧವಾರ ಭಾರತೀಯ ಜನತಾ ಪಕ್ಷದಿಂದ ಶಶೀಲ ಜಿ. ನಮೋಶಿ ಅವರು 4 ನಾಮಪತ್ರ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಶರಣಪ್ಪ ಮಟ್ಟೂರು ಅವರು 2 ನಾಮಪತ್ರ ಹಾಗೂ ಜನತಾದಳ (ಜಾತ್ಯತೀತ) ಪಕ್ಷದಿಂದ ತಿಮ್ಮಯ್ಯ ಪುರ್ಲೆ ಅವರು 1 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Contact Your\'s Advertisement; 9902492681

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇದೂವರೆಗೆ ಒಟ್ಟಾರೆ ಮೂವರು ಅಭ್ಯರ್ಥಿಗಳಿಂದ ಏಳು ನಾಮಪತ್ರ ಸಲ್ಲಿಕೆಯಾದಂತಾಗಿದ್ದು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 8 ಕೊನೆಯ ದಿನವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here