ಜೇವರ್ಗಿ:ಜಿಲ್ಲಾದ್ಯಂತ ವಿವಿಧ ಬೈಕ್ ಕಳ್ಳತನ ಪ್ರಕರಣ ಕುರಿತು ಜೇವರ್ಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ಬೈಕ್ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.
ಡಾ. ಸೀಮಿ ಮರಿಯಮ್ ಜಾರ್ಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರ್ಗಿ ಮಾನ್ಯ ಪ್ರಸನ್ನ ದೇಸಾಯಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಕಲಬುರ್ಗಿ ಗ್ರಾಮೀಣ ಉಪ ವಿಭಾಗ ಕಲಬುರಗಿ ಅಧಿಕಾರಿ ಟಿ. ಜಿ. ದೊಡ್ಡಮನಿ ಹಾಗೂ ಸಿಪಿಐ ರಮೇಶ್ ರೊಟ್ಟಿ ಅವರ ಮಾರ್ಗದರ್ಶನದಲ್ಲಿ ಜೇವರ್ಗಿ ಠಾಣೆಯ ಪಿಎಸ್ಐ ಗಳಾದ ಮಂಜುನಾಥ್ ಹೂಗಾರ ರಮೇಶ್ ಅಂಗಡಿ ಅವರು ಸಿಬ್ಬಂದಿಗಳಿಂದ ಸಹಾಯದೊಂದಿಗೆ 2,10,000. ರೂಪಾಯಿಗಳ ಮೌಲ್ಯದ 7 ದ್ವಿಚಕ್ರ ವಾಹನಗಳು ಇಬ್ಬರು ಕಳ್ಳರನ್ನು ತಮ್ಮ ವಶಕ್ಕೆ ಪಡೆದುಕೊಂಡಿರುತ್ತಾರೆ.
ಸಂಗಮೇಶ್ ಅಂಗಡಿಯವರ ಮಿಂಚಿನ ಕಾರ್ಯಚರಣೆಯಿಂದ ಪೆಟ್ರೋಲಿಂಗ್ ಕರ್ತವ್ಯದ ಮೇಲೆ ಇದ್ದಾಗ ಜೇವರ್ಗಿ ಬಿಜಾಪುರ ಹೊರವಲಯದ ಬೈಪಾಸ್ ರೋಡಿನಲ್ಲಿ ಮೋಟರ್ಸೈಕಲ್ ಗಳೊಂದಿಗೆ ಅನುಮಾನಸ್ಪದವಾಗಿ ಬೈಕ್ ಸವಾರ ಬಸವರಾಜ್ ಲಗೇರಿ ರಮೇಶ್ ದರ್ಶನಾಪುರ್ ಅವರನ್ನು ಮೋಟರ್ಸೈಕಲ್ ವಶಪಡಿಸಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ ಮೇರೆಗೆ ಹೆಡ್ ಕಾನ್ಸ್ಟೇಬಲ್ ಪರಮೇಶ್ವರ್ ಅವರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆದೆ.
ಬೈಕ್ ಕಳ್ಳರಾದ ಬಸವರಾಜ್ ಮತ್ತು ರಮೇಶ್ ಇಬ್ಬರನ್ನು ವಿಚಾರಣೆ ಮಾಡಿದಾಗ ಯಾದಗಿರಿ ಜಿಲ್ಲೆ ಹಾಗೂ ಜೇವರ್ಗಿ ತಾಲೂಕಿನ ಶಾಹಾಪುರ ಪಟ್ಟಣದಲ್ಲಿ ಬೈಕ್ ಕಳ್ಳತನ ಮಾಡಿರುತ್ತೇವೆ ಎಂದು ಒಪ್ಪಿಕೊಂಡಿರುತ್ತಾರೆ.
ಏಳು ಬೈಕ್ ವಶಪಡಿಸಿಕೊಂಡು ಇಬ್ಬರ ಖದೀಮರ ಮೇಲೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.