ರೈತ ಉತ್ಪಾದಕರ ಕಂಪನಿ ತಳಮಟ್ಟದಿಂದ ಗಟ್ಟಿಯಾಗಿ ಬೆಳೆಯಲಿ : ಎಸ್.ಡಿ. ಕಲ್ಯಾಣಶೆಟ್ಟಿ

0
85

ಶಹಾಬಾದ:ರೈತ ಉತ್ಪಾದಕ ಕಂಪನಿಯು ಗ್ರಾಮಗಳಲ್ಲಿ ತಳಮಟ್ಟದಿಂದ ಗಟ್ಟಿಯಾಗಿ ಬೆಳೆದಾಗ ಮಾತ್ರ ಸಣ್ಣ ಅತಿ ಸಣ್ಣ ರೈತರಿಗೂ ಸಹಕಾರಿಯಾಗುತ್ತದೆ ಎಂದು ಮೈರಾಡ ಸಂಸ್ಥೆಯ ಅಧಿಕಾರಿ ಎಸ್.ಡಿ. ಕಲ್ಯಾಣಶೆಟ್ಟಿ ಆಶಯ ವ್ಯಕ್ತಪಡಿಸಿದರು.

ಅವರು ತಾಲ್ಲೂಕಿನ ಭಂಕೂರ ಗ್ರಾಮದ ಬಸವ ಸಮಿತಿ ಶಾಲಾ ಆವರಣದಲ್ಲಿ ಹಿರೋಡೇಶ್ವರ ರೈತ ಉತ್ಪಾದಕ ಕಂಪನಿಯ 2ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ರೈತ ಉತ್ಪಾದಕ ಸಂಸ್ಥೆಗಳು ಕೇವಲ ಹಣಕಾಸಿನ ಆಯವ್ಯಾಯ, ಮತ್ತು ಆರ್ಥಿಕವಾಗಿ ಸಧೃಡವಾದರೆ ಸಾಲದು, ಅದು ತಳ ಸಮುದಾಯದ ಕೊನೆಯ ವ್ಯಕ್ತಿಯಾದ ಸಣ್ಣ ರೈತನಿಗೂ ಅನುಕೂಲವಾಗುವಂತೆ ಬೆಳೆಯಬೇಕು. ಸಣ್ಣ ರೈತರೂ ಆರ್ಥಿಕವಾಗಿ ಸದೃಢರಾಗಿ ಬೆಳೆಯಲು ಶ್ರಮಿಸಿದಾಗ ಮಾತ್ರವೇ ಅದೊಂದು ಉತ್ತಮ ರೈತ ಉತ್ಪಾದಕ ಸಂಸ್ಥೆಯಾಗಿ ಹೊರ ಹೊಮ್ಮುತ್ತದೆ ಎಂದರು. ಆ ನಿಟ್ಟಿನಲ್ಲಿ ಹಿರೋಡೆಶ್ವರ ರೈತ ಉತ್ಪಾದಕರ ಕಂಪನಿ ಕೆಲಸ ನಿರ್ವಹಿಸುತ್ತಿದ್ದು, ಇನ್ನೂ ಪ್ರಗತಿ ಸಾಧಿಸಲಿ ಎಂದರಲ್ಲದೇ ಹಳ್ಳಿಗಳಲ್ಲಿ ಎಲ್ಲಾ ತರಹದ ರೈತರನ್ನು ಒಟ್ಟುಗೂಡಿಸಿ ರೈತ ಆಸಕ್ತ ಗುಂಪುಗಳನ್ನು ರಚನೆ ಮಾಡಿ ಅವರಲ್ಲಿ ಉಳಿತಾಯದ ಮನೋಭಾವ ಬೆಳೆಸಬೇಕು. ಆ ಮೂಲಕ ಅವರು ಕೃಷಿ ಕ್ಷೇತ್ರದಲ್ಲಿ ಬೆಳೆಯಲು ಮತ್ತು ಆರ್ಥಿಕವಾಗಿ ಸಧೃಡರಾಗಲು ಕಂಪನಿ ಶ್ರಮಿಸಲಿ ಎಂದು ಹಾರೈಸಿದರು.

ಬಸವ ಸಮಿತಿಯ ಅಧ್ಯಕ್ಷರಾದ ಅಮೃತ್ ಮಾನಕರ ಮಾತನಾಡಿದರು. ಕಂಪನಿಯ ನಿರ್ದೇಶಕ ಬಸವರಾಜ ರಾಮಗೊಂಡ ಮತ್ತು ಉಪಾಧ್ಯಕ್ಷ ಮಲ್ಲಿಕಾರ್ಜುನ ಇಟಗಿ ವಾರ್ಷಿಕ ಪ್ರಗತಿ ವರದಿಯನ್ನು ಹಾಗೂ ವಾರ್ಷಿಕ ಹಣಕಾಸಿನ ಆಯವ್ಯಯವನ್ನು ಮಂಡಿಸಿದರು.  ನಂತರ ಹೊಸ ನಿರ್ದೇಶಕರ ಆಯ್ಕೆ ಮಾಡಲಾಯಿತು. ವೆಂಕಾರೆಡ್ಡಿ ಪಾಟೀಲ್ ಯರಗಲ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರು.ಪಿ.ಹೆಚ್, ನಿರ್ದೇಶಕರಾದ ಶರಣಪ್ಪಾ ಸಣಮೋ, ನಾಗೇಂದ್ರ ಕಂಠಿ, ನಾಗಣ್ಣ ಮಡಿವಾಳ ಶಂಕರವಾಡಿ, ಶ್ರೀದೇವಿ ಬಿ. ಮರತೂರ, ಶಂಕರ ಪವಾರ್, ಹಣಮಂತರಾವ್ ದುಗೊಂಡ್,  ಸಿಬ್ಬಂದಿಗಳಾದ ಶ್ರೀಮತಿ ಮಹಾದೇವಿ ಎಸ್. ಹೂಗಾರ, ಕ್ಷೇಮಲಿಂಗ್ ನರೋಣಾ, ಚಂದ್ರಕಲಾ ಎನ್, ತಿಪ್ಪಣ್ಣೋರ್, ಮೇನಿಕಾ ಎಸ್. ಮರತೂರಕರ್, ಹಣಮಂತರಾವ್ ತಿಪ್ಪಾ, ನಾಗೇಶ್ ಸುಲೇಪೇಟ್ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here