ಡಾ. ಸಿ.ಎಸ್ ದ್ವಾರಕಾನಾಥ್ ವರದಿ ಜಾರಿಗೆ ಆಗ್ರಹ

0
35

ಯಾದಗಿರಿ: ಜಿಲ್ಲೆಯ ಸುರಪುರ ದಲ್ಲಿ ಇಂದು ಡಾ ಸಿ ಎಸ್ ದ್ವಾರಕಾನಾಥ್ ಆಯೋಗವು ಸರ್ಕಾರಕ್ಕೆ ನೀಡಿರುವ ವರದಿಯನ್ನು ಜಾರಿಗೊಳಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ಸುರಪುರ ತಾಲೂಕ ಘಟಕದ ವತಿಯಿಂದ ಪ್ರತಿಭಟಿಸಿದರು.

ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಆವರಣ ದಿಂದ ಆರಂಭವಾದ ಪ್ರತಿಭಟನೆಯು ಮುಖ್ಯ ರಸ್ತೆಯ ಮುಖಾಂತರ ಶ್ರೀ ಮಹಾತ್ಮ ಗಾಂಧೀಜಿ ವೃತ್ತದಿಂದ ನೇರವಾಗಿ ತಹಶೀಲ್ದಾರರ ಕಛೇರಿಗೆ ತೇರಳಿ ತಸಿಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷರಾದ ಡಾ ಅಬ್ದುಲ್ ರಜಾಕ್ ನದಾಫ ಮಾತನಾಡಿದ ಅವರು 25 ವರ್ಷಗಳಿಂದ ವಂಚನೆಗೆ ಒಳಗಾಗುತ್ತಿರುವ ನಮ್ಮ ಸಮುದಾಯ ರಸ್ತೆಗೆ ಇಳಿದು ಹೋರಾಟ ಮಾಡಲು ಧೈರ್ಯ ವಿಲ್ಲಾ ಅದನ್ನು ದುರುಪಯೋಗ ಎಂದು ಭಾವಿಸದೆ ಸರ್ಕಾರ ಆದಷ್ಟು ಬೇಗನೆ ನಮ್ಮ ಮನವಿಗೆ ಸ್ಪಂದಿಸ ಬೇಕು ಎಂದರು.

ಇದೇ ರೀತಿ ಮುಂದುವರೆದರೆ ರಾಜ್ಯಾದಂತ ಪಿಂಜಾರ ಸಮುದಾಯ ಅನಿವಾರ್ಯವಾಗಿ ಬೀದಿಗಿಳಿದು ಹಕ್ಕನ್ನು ಪಡೆಯುವ ಸಂದರ್ಭ ಬರಬಹುದು ಅದಕ್ಕೆ ಸಮುದಾಯದ ಯುವಕರು ಎಲ್ಲರೂ ಒಗ್ಗಟ್ಟಿನಲ್ಲಿ ಮುಂದೆ ಸಾಗೋಣವೆಂದರು.

ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಅಧ್ಯಕ್ಷ ಅಹ್ಮದ್ ಪಠಾಣ್ ಮಾತನಾಡಿ ಭೌಗೋಳಿಕ ಸ್ವರೂಪದಲ್ಲಿ ಪಿಂಜಾರ ನದಾಫ ಸಮಾಜ ಆರ್ಥಿಕ ಕೃಷಿ ಕಾರ್ಮಿಕ ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲಿಸಲಾಗಿ ಸಂಪೂರ್ಣವಾಗಿ ಹಿಂದುಳಿದಿದೆ ರಾಜ್ಯದಲ್ಲಿ 38 ಲಕ್ಷಕ್ಕೂ ಹೆಚ್ಚು ಜನಾಂಗವಿದ್ದು ಪ್ರತಿಶತ 80 ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಉಗ್ರವಾಗಿ ಮಾತನಾಡಿ ಇದನ್ನು ಸಮುದಾಯಕ್ಕೆ ಸರಕಾರ ತೋರಿಸುತ್ತಿರುವ ನಿಸ್ಕಾಳಜಿಯನ್ನು ಸಹಿಸುವುದಿಲ್ಲ ಎಂದು ಮಾತನಾಡಿದರು.

ಇನ್ನೋರ್ವ ಅಥಿತಿ ಅಖಿಲ ಭಾರತ ಮಹಾಮಂಡಳದ ಶಹಾಪುರ ತಾಲೂಕ ಅಧ್ಯಕ್ಷ ನದಾಫ್ ಮಾತನಾಡಿ
ಪಿಂಜಾರ ನದಾಫ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಡಾ ಸಿ ಎಸ್ ದ್ವಾರಕಾನಾಥ್ ವರದಿಯನ್ನು ಶೀಘ್ರ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಹುಣಸಗಿ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿ ಸೋಪಿಸಾಬ್ ಡಿ ಸುರಪುರ ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗಳಲ್ಲಿ ಜಾತಿ ನೋಂದಣಿ ತಪ್ಪಾದಲ್ಲಿ ಅದನ್ನು ಪಂಚನಾಮೆ ಮೂಲಕ ಸರಿಪಡಿಸುವಲ್ಲಿ ಸರ್ಕಾರ ಆದೇಶ ನೀಡಬೇಕು ಸಮುದಾಯದಲ್ಲಿರುವ ಬಡವರಿಗೆ ನಾನಾ ವಸತಿ ಯೋಜನೆ ಅಡಿಯಲ್ಲಿ ನಿವೇಶನ ಒದಗಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು ಹಾಗೂ ಸಚಿವ ಸಂಪುಟದಲ್ಲಿ ಡಾ ಸಿ ಎಸ್ ದ್ವಾರಕಾನಾಥ್ ವರದಿ ಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ಜಿಲ್ಲಾ ಉಪಾಧ್ಯಕ್ಷ ಎಚ್ ನಾಗರಾಳ ಪ್ರಧಾನ ಕಾರ್ಯದರ್ಶಿ ಬಾವಾಸಾಬ ಪರಸನಹಳ್ಳಿ ಕಾರ್ಯದರ್ಶಿ ಶರಮುದ್ದೀನ ಶಖಾಪುರ ಹುಣಸಗಿ ತಾಲೂಕ ಘಟಕದ ಅಧ್ಯಕ್ಷ ಬಂದಗಿಸಾಬ ಎಚ್ ಅಗ್ನಿ ಉಪಾಧ್ಯಕ್ಷ ಕಾಸಿಂಸಾಬ ಎಸ್ ಕಕ್ಕಲದೊಡ್ಡಿ ಕಾರ್ಯದರ್ಶಿ ಹುಸೇನಸಾಬ್ ಎಂ ಗಾದಿ ರಾಜೇಸಾಬ ಬಿ ನದಾಫ ದಾವಲಸಾಬ ಕಕ್ಕೇರಾ ನಬಿಸಾಬ ದೇವಾಪುರ ಜೆ ಕಾಜೇಸಾಬ್ ನಾಗರಾಳ ದಸ್ತಗಿರ ಶಹಾಪುರ ಹಾಗೂ ವಿವಿಧ ಹಳ್ಳಿಗಳಿಂದ ಸಮಾಜದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here