ಕಲಬುರಗಿಯಲ್ಲಿ ಸಡಗರದಿಂದ ಈದ್ ಉಲ್ ಫಿತರ್ ಆಚರಣೆ

0
96

ಕಲಬುರಗಿ: ಇಂದು ದೇಶದ್ಯಾಂತ ಈದ್ ಉಲ್ ಫಿತರ್ ಸರಡಗರ ಸಂಭ್ರಮದಿಂದ ಆಚರಿಸಲಾಯಿತು.

ಮುಸ್ಲಿಂ ಬಾಂಧವರು ನಗರದ ವಿವಿಧ ಮಸೀದಿ ಹಾಗೂ ಈದ್ಗಾ ಮೈದಾನಗಳಿಗೆ ತೆರಳಿ ರಂಜಾನ್ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿ ನಮಾಜ್ ನಿರ್ವಹಿಸಿದರು.

Contact Your\'s Advertisement; 9902492681

ಇದಕ್ಕೂ ಮುನ್ನ ತಿಂಗಳು ಪೂರ್ತಿ ಉಪವಾಸ ವ್ರತ ಆಚರಿಸದ ಮುಸ್ಲಿಂ ಬಾಂಧವರು, ಸ್ವಚ್ಛತೆಯೊಂದ ಹೊಸ ಬಟ್ಟೆಗಳನ್ನು ಧರಿಸಿ, ಪ್ರವಾದಿ ಮಹ್ಮದ್ ಪೈಗಂಬರ್ ಅವರು ತಿಳಿಸಿರುವ ಪ್ರಕಾರ ಬಟ್ಟೆಗೆ ಸುಗಂಧಿತ ಇತರ್ ಹಾಕಿಕೊಂಡು ಮನೆಯಿಂದ ಈದ್ಗಾ ಹಾಗೂ ಮಸೀದಿಯ ಕಡೆಗೆ ಅಲ್ಲಾಹನ ಹೆಸರನ್ನು ಕೂಗುತ್ತ ತೆರಳಿದರು.

ನಂತರ ರಂಜಾನ್ ವಿಶೇಷ ಪ್ರಾರ್ಥನೆ ಹಾಗೂ ನಮಾಜ್ ನಿರ್ವಹಿಸಿ ಈದ್ಗಾದಲ್ಲಿ ಸ್ನೇಹಿತ, ಸಂಬಂಧಿಗಳಿಗೆ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಈದ್ ಶುಭಾಷಯ ವಿನಿಮಯ ಮಾಡಿಕೊಂಡು ಶಾಂತಿಯ ಸಂಕೇತವನ್ನು ರವಾನಿಸಿದರು.

ಅಲ್ಲದೇ ಬಡವರಿಗೆ ಝಕಾತ್ ಮತ್ತು ಫಿತ್ರಾ ವಿತರಿಸುವ ಮೂಲಕ ಬಡವರಿಗೆ ನೆರವಾಗುವ ಕುರಿತು ಇಸ್ಲಾಂ ನೀಡಿರುವ ನಿಯಮವನ್ನು ಮುಸ್ಲಿಂ ಬಾಂಧವರು ಕಡ್ಡಾಯವಾಗಿ ಪಾಲಿಸಿದರು.

ಮುಸ್ಲಿಂ ಸಮುದಾಯದಲ್ಲಿ ಕೆಲವರು ಈದ್ ಆಚರಿಸಲು ಆರ್ಥಿಕವಾಗಿ ಅಸಮರ್ಥವಿರುವ ಕುಟುಂಬ ಹಾಗೂ ಬಡಾವಣೆಯಲ್ಲಿರುವ ಬಡವರಿಗೆ ಈದ್ ಪ್ರಯುಕ್ತ ಫಿತ್ರಾ ಝಕಾತ್ ನೀಡುವ ಮೂಲಕ ಅವರು ಕೂಡ ಹಬ್ಬವನ್ನು ಆಚರಿಸಲು ಅನುಕೂಲವಾಗುವಂತೆ ಸಹಾಯ ಮಾಡುವ ಮೂಲಕ ಇಸ್ಲಾಂ ತಿಳಿಸಿರುವ ನಿಯಮವನ್ನು ಮುಸ್ಲಿಂ ಬಾಂಧವರು ಪಾಲಿಸಿ ಪ್ರವಾದಿ ಮಹ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು.

ಈದ್ ಉಲ್ ಫಿತರ್ ನಮಾಜ್ ನಂತರ ಮುಸ್ಲಿಂ ಬಾಂಧವರು ತಮಗೆ, ಆತ್ಮೀಯವಾಗಿರುವ ಇತರೆ ಧರ್ಮ ಹಾಗೂ ಸಮುದಾಯದ ಸ್ನೇಹಿತರಿಗೆ ಈದ್ ಶುಭಾಷಯ ಕೋರಿದರು. ನಂತರ ಮನೆಗೆ ಆಹ್ವಾನಿಸಿ ರಂಜಾನ್ ವಿಶೇಷವಾದ ಶಿರ್ ಖುರ್ಮಾ ಹಾಗೂ ಹಬ್ಬದ ಇತರೆ ಆಹಾರ ತಿನಿಸುಗಳನ್ನು ಅವರೊಂದಿಗೆ ಸೇವಿಸಿ ಇತರೆ ಸಮುದಾಯದ ಜನರೊಂದಿಗೆ ರಂಜಾನ್ ಹಬ್ಬವನ್ನು ಆಚರಿಸಿದರು. ಈ ಮೂಲಕ ರಂಜಾನ್ ಪ್ರಯುಕ್ತ ಭಾವೈಕ್ಯ ಸಾರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here