ಕೆ.ಎಚ್.ಬಿ ಗ್ರೀನ್ ಪಾರ್ಕನಲ್ಲಿ ಸ್ವದೇಶಿ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ

0
107

ಕಲಬುರಗಿ: ನಗರದ‌ ಸಂತೋಷ ಕಾಲೋನಿಯಲ್ಲಿರುವ ಕೆಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ರವಿವಾರ ಸಾನ್ವಿ ಸ್ವದೇಶಿ ಆಹಾರ ಉತ್ಪನ್ನಗಳ ಕೆಂದ್ರದ ವತಿಯಿಂದ ಸ್ವದೇಶಿ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನೇರವೆರಿಸಲಾಯಿತು.

ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟನೆ ಮಾಡಿ ಮಾತನಾಡಿದ  ಕೆ.ಎಚ್.ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಮಾರುಕಟ್ಟೆಯಲ್ಲಿ ದೇಶೀಯ ಉತ್ಪನ್ನಗಳಿಗಿಂತ ವಿದೇಶಿ ವಸ್ತುಗಳೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿವೆ. ದೇಶದ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಮಿಶ್ರಣವಿಲ್ಲದ ಮತ್ತು ರಾಸಾಯನಿಕಗಳಿಲ್ಲದ ಗುಣಮಟ್ಟದ ಸ್ವದೇಶಿ ಉತ್ಪನ್ನಗಳನ್ನು ಕೊಳ್ಳುವುದರ ಮೂಲಕ ನಮ್ಮವರಿಗೆ ಅನುಕೂಲ ಮಾಡುವುದರ ಜೋತೆಗೆ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಶರಣು ಅರಳಿಮರ, ಜಿಲ್ಲಾ ಪಂಚಾಯತ ಅಧ್ಯಕ್ಷರ ಆಪ್ತ ಸಹಾಯಕರು ಕಲಬುರಗಿ, ಪ್ರದೀಪ ಶಿಲವಂತ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆಪ್ತಸಹಾಯಕರು ಕಲಬುರಗಿ, ರಾಚಯ್ಯ ಸ್ವಾಮಿ RDPR ಸಚಿವರ ಆಪ್ತ ಸಹಾಯಕರು.

ಸಂಗಮನಾಥ ಕಣ್ಣಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರ ಆಪ್ತಸಹಾಯಕರು ಕಲಬುರಗಿ, ಲಕ್ಷ್ಮಣ ಚವ್ಹಾಣ ಸಂಸದರ ಪ್ರೋಟೋಕಾಲ ವಾಹನ ಚಾಲಕರು, ರಮೇಶ ಮೆಲಗಿರಿ ಎಪ್.ಡಿ.ಎ ಜಿಲ್ಲಾ ಪಂಚಾಯತ ಕಲಬುರಗಿ, ರಾಜೇಶ ಜಿಂಗಾಡೆ ಎಫ್.ಡಿ.ಎ.ಎ ಜಿಲ್ಲಾ ಪಂಚಾಯತ ಕಲಬುರಗಿ, ದತ್ತಾತ್ರೇಯ ಸಾಬನಿ, ಸಾನ್ವಿ ಸಾಬನಿ, ಬಾಲಕೃಷ್ಣ ಕುಲಕರ್ಣಿ, ರೇವಣಸಿದ್ದಪ್ಪ ರುದ್ರವಾಡಿ, ಸೂರ್ಯಕಾಂತ ಸಾವಳಗಿ, ಕೆ.ಎಮ್ ಲೋಕಯ್ಯ, ಬಸವಣ್ಣಪ್ಪ ಬಿರಾದಾರ, ಅಮೃತ ನಾಯಕ, ಸಂತೋಷ ಹೂಗಾರ, ಪ್ರದೀಪ ಕುಂಬಾರ, ಅಭಿಶೇಕ ಬಿರಾದಾರ, ಬಸವರಾಜ ಹೆಳವರ ಯಾಳಗಿ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here