ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಡಾ:ಬಾಬಾ ಸಾಹೇಬ್ ಅಂಬೇಡ್ಕರರ ಜೀವನಾಧಾರಿತ ಮಹಾನಾಯಕ ಧಾರಾವಾಹಿಗೆ ಬೆಂಬಲಿಸಿ ಬ್ಯಾನರ್ ಅನಾವರಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ದೊಡ್ಡ ದೇಸಾಯಿ ಮಾತನಾಡಿ,ಮಹಾನಾಯಕ ಧಾರಾವಾಹಿ ನಮ್ಮೆಲ್ಲರ ಸ್ವಾಭಿಮಾನದ ಸಂಕೇತವಾಗಿದೆ.ಇಂದು ಮಹಾನಾಯಕ ಧಾರಾವಾಹಿಯು ನಮ್ಮೆಲ್ಲರಿಗು ಆದರ್ಶ ಎನ್ನುವಂತಾಗಿದೆ.ಡಾ:ಬಾಬಾ ಸಾಹೇಬ್ ಅಂಬೇಡ್ಕರರ ಜೀವನ ಮತ್ತು ಸಾಧನೆಯು ಎಲ್ಲ ಮಕ್ಕಳಿಗು ಸ್ಪೂರ್ಥಿಯಾಗಬೇಕೆಂದರು.
ನ್ಯಾಯವಾದಿ ಹೆಚ್.ಎನ್.ಬಳಬಟ್ಟಿ ಮಾತನಾಡಿ,ದೇಶದ ಪ್ರತಿಯೊಬ್ಬರು ಇಷ್ಟಪಡುವ ಹಾಗು ಇಡೀ ಜಗತ್ತೆ ಗೌರವಿಸುವ ವ್ಯಕ್ತಿ ಡಾ: ಬಾಬಾ ಸಾಹೇಬ್ ಅಂಬೇಡ್ಕರರಾಗಿದ್ದಾರೆ.ಆ ಮಹಾಪುರಷ ಬರೆದ ಭಾರತದ ಸಂವೀಧಾನವು ಜಗತ್ತಿಗೆ ಮಾದರಿಯಾಗಿದೆ.ಅಂತಹ ಅಂಬೇಡ್ಕರರಿಗೆ ಬಾಲ್ಯದಲ್ಲಿ ಅವರಿಗೆ ಮತ್ತವರ ಕುಟುಂಬಕ್ಕೆ ಮತಿಯ ಶಕ್ತಿಗಳು ನೀಡಿದ ಕಿರುಕುಳ ನೋಡಿದರೆ ತುಂಬಾ ಬೇಸರವಾಗುತ್ತದೆ.ಅಂತಹ ಕಷ್ಟವನ್ನು ಅನುಭವಿಸದ ಬಾಬಾ ಸಾಹೇಬರು ತಮ್ಮ ಮುಂದಿನ ಪೀಳಿಗೆಗೆ ಅವರಂತಹ ಕಷ್ಟ ಪಡಬಾರದೆಂದು ಸಂವಿಧಾನದಲ್ಲಿ ಎಲ್ಲರಿಗು ಆದ್ಯತೆ ನೀಡಿದ್ದಾರೆ.ಆದ್ದರಿಂದ ಸಂವೀಧಾನದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರು ಬದುಕಬೇಕಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಬ್ಯಾನರ್ ಉದ್ಘಾಟಿಸಲಾಯಿತು.ಇದೇ ಸಂದರ್ಭದಲ್ಲಿ ಗ್ರಾಮದ ಮರಗಮ್ಮ ದೇವಸ್ಥಾನದ ಬಳಿಯಲ್ಲಿಯೂ ಇನ್ನೊಂದು ಮಹಾನಾಯಕ ಬ್ಯಾನರ್ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಸಣ್ಣ ದೇಸಾಯಿ ಸಿದ್ದಯ್ಯ ಸ್ಥಾವರಮಠ ಶರಣಪ್ಪ ಎಲ್‌ಐಸಿ ವೆಂಕಟೇಶ ಹೊಸ್ಮನಿ ಬಲಭೀಮ ದೇಸಾಯಿ ಮಲ್ಲಿಕಾರ್ಜುನ ಹಿರೇಮಠ ಲಿಂಗಣ್ಣ ಗೋನಾಲ ಕೈದಾಳ ಕೃಷ್ಣಮೂರ್ತಿ ಮಾಳಪ್ಪ ಕಿರದಹಳ್ಳಿ ನಾಗಣ್ಣ ಕಲ್ಲದೇವನಹಳ್ಳಿ ಭೀಮರಾಯ ಸಿಂಧಗೇರಿ ಮೂರ್ತಿ ಬೊಮ್ಮನಹಳ್ಳಿ ಮಲ್ಲಿಕಾರ್ಜು ಕಮತಗಿ ಮಹಾಂತೇಶ ಗೋನಾಲ ಹಣಮಂತ ಚಂದ್ಲಾಪುರ ಮಲ್ಲು ಕೆಸಿಪಿ ಮಲ್ಲಿಕಾರ್ಜುನ ಹಾದಿಮನಿ ಶರಣಪ್ಪ ತಳವಾರಗೇರಾ ಸೇರಿದಂತೆ ಅನೇಕರಿದ್ದರು.