ಶಹಾಬಾದನಲ್ಲಿ ಸರಕಾರಿ ಕಛೇರಿಗಳನ್ನು ಪ್ರಾರಂಭಿಸಲು ರಾಜ್ಯಾಧ್ಯಕ್ಷರಿಗೆ ಈರಣ್ಣ ಕೆಂಭಾವಿ ಮನವಿ

0
182

ಶಹಾಬಾದ: ರಾಜ್ಯದಲ್ಲಿಯೇ ಅತ್ಯಂತ ಚಿಕ್ಕದಾದ ತಾಲೂಕಾ ಶಹಾಬಾದನಲ್ಲಿ ಸರಕಾರಿ ಕಛೇರಿಗಳನ್ನು ಅತಿ ಶೀಘ್ರವೇ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಸರಕಾರಿ ನೌಕರರ ಸಂಘದ ಶಹಾಬಾದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಅವರು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ದಾವಣಗೆರೆಯಲ್ಲಿ ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಈರಣ್ಣ ಕೆಂಭಾವಿ, ರಾಜ್ಯದಲ್ಲಿ ಹೊಸ ತಾಲೂಕುಗಳು ಉದಯವಾಗಿ ಸುಮಾರು ಎರಡುವರೆ ವರ್ಷ ಕಳೆಯುತ್ತ ಬಂದರೂ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.ಪರಿಣಾಮವಾಗಿ ಜನರು ತಮ್ಮ ಕೆಲಸ, ಕಾರ್ಯಗಳಿಗೆ ಚಿತ್ತಾಪೂರ ತಾಲೂಕಿಗೆ ಅಲೆದಾಡುವುದು ಇನ್ನೂ ತಪ್ಪಿಲ್ಲ.ಆಡಳಿತ ವಿಕೇಂದ್ರೀಕರಣ ಕಾಗದಕ್ಕೆ ಸೀಮಿತವಾಗಿದೆ ಎಂದರು.

Contact Your\'s Advertisement; 9902492681

ತಹಸೀಲ್ದಾರ, ತಾಪಂ, ಸಿಡಿಪಿಓ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ ಇಲಾಖೆ,ಉಪಖಾಜಾನೆ, ಪೊಲೀಸ್ ಇಲಾಖೆ ಕಛೇರಿಗಳನ್ನು ಹೊರತುಪಡಿಸಿ ಇತರೆ ಇಲಾಖಾ ಕಛೇರಿಗಳು ಈವರೆಗೆ ತಲೆ ಎತ್ತಿಲ್ಲ.ಇದರಿಂದ ಜನರಿಗೆ ಚಿತ್ತಾಪೂರ ತಾಲೂಕಾ ಕೇಂದ್ರಕ್ಕೆ ಮತ್ತೆ ಓಡಾಡುವುದರಿಂದ ತೊಂದರೆಯಾಗುತ್ತಿದೆ. ಅಲ್ಲದೇ ತಾಲೂಕಾ ಕೇಂದ್ರದಲ್ಲಿ ಇರಬೇಕಾದ ಕೃಷಿ ಸಹಾಯಕ ನಿರ್ಧೇಶಕರ ಕಛೇರಿ, ತೋಟಗಾರಿಕೆ ಮತ್ತು ರೇಷ್ಮೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಲೋಕೋಪಯೋಗಿ ಸೇರಿದಂತೆ ಸರಕಾರಿ ನೌಕರರ ಭವನಕ್ಕೆ ಅನುದಾನ ಹಾಗೂ ಜಾಗ ಮಂಜೂರು ಮಾಡಬೇಕು. ಪ್ರೌಢಶಾಲಾ ಶಿಕ್ಷಕರಿಗೆ ಕಾಲೇಜಿಗೆ ಬಡ್ತಿ ನೀಡಬೇಕು. ಅದರಲ್ಲೂ ಶೈಕ್ಷಣಿಕ ಹಿತದೃಷ್ಠಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೇಗನೆ ಪ್ರಾರಂಭ ಮಾಡಬೇಕೆಂದು ಆಗ್ರಹಿಸಿದರು.

ಸರಕಾರಿ ನೌಕರರ ಸಂಘದ ಚಿತ್ತಾಪೂರ ತಾಲೂಕಾಧ್ಯಕ್ಷ ಬಸವರಾಜ ಬಳೊಂಡಗಿ,ಚಿತ್ತಾಪೂರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಪ್ರಮೋದಕುಮಾರ, ಸಂಘದ ರಾಜ್ಯ ಪರಿಷತ್ ಸದಸ್ಯ ಶಶಿಕಾಂತ ಭರಣಿ, ಪ್ರಧಾನ ಕಾರ್ಯದರ್ಶಿ ಸಂಜಯ ರಾಠೋಡ, ಗೌರಾವಾಧ್ಯಕ್ಷ ಸಂತೋಷ ಸಲಗರ, ಖಜಾಂಚಿ ರಮೇಶ ಕುಲಕರ್ಣಿ, ರವಿಕುಮಾರ ರಾಠೋಡ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here