ಬದಲಾವಣೆಗಾಗಿ ಮಹಿಳೆಯರು ಮೀಸಲಾತಿ ಬಳಸಿಕೊಳ್ಳಿ- ಆನಂದರಾಜ

0
68

ಶಹಾಬಾದ:ಮೀಸಲಾತಿಯ ಸ್ವಾತಂತ್ರ್ಯವನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಮಾರ್ಗದರ್ಶಿ ಸಂಸ್ಥೆಯ ನಿರ್ಧೇಶಕ ಡಿ.ಆನಂದರಾಜ ಹೇಳಿದರು.

ಅವರು ಮರತೂರ ಗ್ರಾಮದಲ್ಲಿ ಕಲಬುರಗಿಯ ಮಾರ್ಗದರ್ಶಿ ಸಂಸ್ಥೆಯ ವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಮೀಸಲಾತಿ ಕುರಿತು ಆಯೋಜಿಸಲಾದ ಕಾರ್ಯಗಾರದಲ್ಲಿ ಮಾತನಾಡಿದರು.

Contact Your\'s Advertisement; 9902492681

ಸಮಾಜದಲ್ಲಿ ಮಹಿಳೆಯರಿಗಾಗಿ ಸರಕಾರ ಶೇ.50%ರಷ್ಟು ರಾಜಕೀಯ ಮೀಸಲಾತಿಯನ್ನು ನಿಗದಿಪಡಿಸಿದ್ದರೂ ಕೂಡಾ ಮಹಿಳೆಯರಿಗೆ ನೀಡುತ್ತಿರುವ ಸ್ವಾತಂತ್ರ್ಯವನ್ನು ಪುರುಷರು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮಹಿಳೆಯರು ಆಡಳಿತ ನಡೆಸುವುದಕ್ಕೆ ಅಡ್ಡಿಯಾಗುತ್ತಿದೆ. ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡರೇ ಪ್ರಮುಖ ಹುದ್ದೆಗಳಲ್ಲಿ ನಾವು ಮಹಿಳೆಯರನ್ನು ನೋಡಲು ಸಾಧ್ಯ. ಕಾನೂನು ಚೌಕಟ್ಟಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡರೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡು ಗ್ರಾಮದ ಅಭಿವೃದ್ಧಿ ಮಾಡಬಹದು.ಸಮಾಜದಲ್ಲಿ ಮಹಿಳೆಯರು ಪ್ರಗತಿ ಸಾಧಿಸಬಹುದೆಂದು ಹೇಳಿದರು.

ಮಾರ್ಗದರ್ಶಿ ಸಂಸ್ಥೆಯ ಸಂಯೋಜಕ ಶ್ರೀನಿವಾಸ ಕುಲಕರ್ಣಿ, ಸಿಬ್ಬಂದಿಗಳಾದ ಶಿವಕುಮಾರ, ಯಲ್ಲುಬಾಯಿ,ಗ್ರಾಪಂ ಮಾಜಿ ಮಹಿಳಾ ಪ್ರತಿನಿಧಿ ಕಲ್ಪನಾ ಕಾಂಬಳೆ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here