ಸುರಪುರ: ನಗರದ ಸತ್ಯಂಪೇಟೆಯ ವಣಕಿಹಾಳ ಕೆರೆಗೆ ಸುರಪುರ ಉಪ ವಿಭಾಗದ ಉಪ ಅಧೀಕ್ಷಕ ವೆಂಕಟೇಶ ಹುಗಿಬಂಡಿ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.ಈ ಸಂದರ್ಭದಲ್ಲಿದ್ದ ಸಂತ್ರಸ್ತರ ಸಮಸ್ಯೆಗಳನ್ನು ಕುರಿತು ಮಾತನಾಡಿದ ಡಿವೈಎಸ್ಪಿಯವರು ನಿಮ್ಮ ಸಮಸ್ಯೆಗಳು ಕಾಣುತ್ತಿವೆ ತಾಲೂಕು ಆಡಳಿತದಿಂದ ಸಾಧ್ಯವಾದ ನೆರವನ್ನು ಕೊಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅನೇಕ ಜನ ಸಂತ್ರಸ್ತರು ತಮ್ಮ ಗೋಳು ತೋಡಿಕೊಂಡು ’ಸಾಹೇಬರೆ ನಮಗೆ ಇಲ್ಲಿ ಇರಲು ಆಗುತ್ತಿಲ್ಲ ಸಂಜೆಯಾದರೆ ಹಾವು ಚೇಳುಗಳ ಭಯವಾಗುತ್ತಿದೆ,ಎರಡು ದಿನಗಳಿಂದ ಸರಿಯಾದ ಊಟ ನೀರು ಇಲ್ಲದೆ ತೊಂದರೆಯಲ್ಲಿದ್ದೇವೆ ಏನಾದರು ನಮಗೆ ವ್ಯವಸ್ಥೆ ಮಾಡಿಸಿಕೊಡಿ’ ಎಂದು ಬೇಡಿಕೊಂಡರು.
ಎಲ್ಲಾ ಸಂತ್ರಸ್ತರ ಸಮಸ್ಯೆಗಳನ್ನು ಕೇಳಿದ ನಂತರ ಡಿವೈಎಸ್ಪಿಯವರು ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಿ ವಣಕಿಹಾಳ ಜನತೆಗೆ ಬೇಕಿರುವ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಾಂತಪ್ಪ ಸಿಬ್ಬಂದಿಗಳಾದ ಓಂಕಾರೆಪ್ಪ ಪೂಜಾರಿ ಶಿವಪುತ್ರ ಇತರರಿದ್ದರು.
ಇದರ ಕುರಿತು ಜಿಲ್ಲಾಡಳಿತ ಸ್ಥಳಿಯ ತಹಸೀಲ್ದಾರರಿಗೆ ಮಾಹಿತಿ ನೀಡಿದಂತೆ ಮಂಗಳವಾರ ಬೆಳಿಗ್ಗೆ ತಾಲೂಕು ಆಡಳಿತದಿಂದ ವಣಕಿಹಾಳದ ಗ್ರಾಮ ಲೆಕ್ಕಗರಾದ ಮಲ್ಲಮ್ಮ ಅವರು ಎಲ್ಲಾ ಸಂತ್ರಸ್ತರಿಗೆ ಅಗತ್ಯ ವಸ್ತುಗಳಾದ ಅಕ್ಕಿ ಬೇಳೆ ತರಕಾರಿ ಸೇರಿದಂತೆ ಅನೇಕ ವಸ್ತುಗಳನ್ನು ವಿತರಿಸಿದ್ದಾರೆ.