ಸುರಪುರ: ತಾಲೂಕಿನಲ್ಲಿ ನಿಧಿಗಳ್ಳತನ ನಡೆಯುತ್ತಿವೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು,ಅಲ್ಲದೆ ಹಂಪಿಯಂತಹ ಐತಿಹಾಸಿಕ ಸ್ಥಳಗಳಲ್ಲಿ ನಿಧಿಗಳು ಇವೆ ಎಂದು ವಿದೇಶಿಗರು ಸ್ಥಳಗಳನ್ನು ಅಗೆಯುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ತಾಲೂಕಿನಲ್ಲಿ ಮತ್ತೆ ನಿಧಿಗಳ್ಳರ ಹಾವಳಿ ಕಾಣಿಸಿಕೊಂಡಿದೆ.
ತಾಲೂಕಿನ ತಳವಾರಗೇರಾ ಗ್ರಾಮದ ಬಳಿಯ ಗುಡ್ಡದಲ್ಲಿ ನಿಧಿಯನ್ನು ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಮದ ಮುಂಬಾಗದ ಗುಡ್ಡದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಬಳಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಯಾರೋ ನಿಧಿ ತೆಗೆದಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.ಗುಡ್ಡದಲ್ಲಿ ಚಿಕ್ಕದಾದ ಗುಂಡಿಯೊಂದನ್ನು ತೋಡಲಾಗಿದ್ದು, ಗುಂಡಿಯನ್ನು ಅಗೆದು ನಿಧಿ ತೆಗೆದುಕೊಂಡು ಹೋಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಸತ್ಯಾಸತ್ಯತೆಯು ಪೊಲೀಸರ ತನಿಖೆ ಅಥವಾ ಪುರಾತತ್ವ ಇಲಾಖೆ ಉತ್ಖನನ ನಡೆಸಿ ಹೇಳಬೇಕಿದೆ.
ಈ ಸ್ಥಳ ಈಗ ಜನರ ಕುತೂಹಲದ ಸ್ಥಳವಾಗಿದೆ.ಗ್ರಾಮದ ಅನೇಕ ಜನರು ಗುಡ್ಡಕ್ಕೆ ಬಂದು ಅಗೆದ ಸ್ಥಳವನ್ನು ನೊಡುತ್ತಿದ್ದು,ಗುಡ್ಡದಲ್ಲಿ ನಿಧಿ ಇರಬಹುದು ಎಂದು ಜನರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.