ಮುಂದಿನ ವರ್ಷ ದೇಶದ ಆರ್ಥಿಕತೆ ಸಹಜ ಸ್ಥಿತಿಗೆ: ಕೇಂದ್ರ ರಾಸಾಯನಿಕ ಸಚಿವ ಡಿ ವಿ ಸದಾನಂದಗೌಡ

0
69

ಬೆಂಗಳೂರು: ಕೋವಿಡ್‌ ಸಮಯದಲ್ಲೂ ದೇಶದಲ್ಲಿ ಶೇಕಡಾ 40 ರಷ್ಟು ಹೆಚ್ಚು ರಾಸಾಯನಿಕ ಗೊಬ್ಬರಗಳ ಮಾರಾಟವಾಗಿದ್ದು, ಜನರು ಕೃಷಿಯತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಕೋವಿಡ್‌ ಸಂಕಷ್ಟ ಕಾಲದಲ್ಲೂ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಂತಹ ಕಾರ್ಯಕ್ಕೆ ಚಾಲನೆ ಸಿಗುತ್ತಿರುವುದು ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಪುನಶ್ಚೇತಗೊಳ್ಳುವತ್ತ ದಾಪುಗಾಲು ಹಾಕುತ್ತಿರುವುದನ್ನು ತೋರಿಸುತ್ತವೆ. ವಿಶ್ವಬ್ಯಾಂಕ್‌ ವರದಿಯ ಪ್ರಕಾರ ಮುಂದಿನ ವರ್ಷ ದೇಶದ ಆರ್ಥಿಕತೆ ಹಾದಿಗೆ ಬರಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾದ ಡಿ ವಿ ಸದಾನಂದಗೌಡ ಹೇಳಿದ್ದಾರೆ.

ಯಲಹಂಕದಲ್ಲಿ ಸಾಯಿಕಲ್ಯಾಣ್‌ ವಾಟರ್‌ ಎಡ್ಜ್‌ ವಸತಿ ಸಮುಚ್ಚಯದ ಭೂಮಿಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಢಿದರು. ಕರೋನಾ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕತೆ ಕುಸಿತ ಕಂಡಿದೆ. ನಮ್ಮದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕತೆ ಬೆಳೆಯುತ್ತಿರುವ ದೇಶ. ನಮ್ಮ ದೇಶದ ಆರ್ಥಿಕತೆಗೂ ಕೂಡಾ ಬಹಳಷ್ಟು ಆಘಾತ ಉಂಟಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆ, 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್‌ ಆರ್ಥಿಕತೆಗೆ ಒಳ್ಳೆಯ ಬಲವನ್ನು ನೀಡಿದೆ.

Contact Your\'s Advertisement; 9902492681

ಮೊನ್ನೆ ಬಿಡುಗಡೆಯಾದ ವಿಶ್ವಬ್ಯಾಂಕ್‌ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಶೇಕಡಾ 8 ರಷ್ಟು ಜಿಡಿಪಿ ವೃದ್ದಿ ಆಗುವ ಮೂಲಕ ಆರ್ಥಿಕತೆಯಲ್ಲಿ ಚೀನಾ ದೇಶವನ್ನು ಭಾರತ ದೇಶ ಹಿಂದಿಕ್ಕಲಿದೆ. ಕೋವಿಡ್‌ ಸಮಯದಲ್ಲಿ ದೇಶದಲ್ಲಿ ಶೇಡಕಾ 40 ರಷ್ಟು ರಾಸಾಯನಿಕ ಗೊಬ್ಬರಗಳ ಮಾರಾಟ ಹೆಚ್ಚಾಗಿದೆ. ಕೃಷಿಯತ್ತ ಜನರ ಒಲವು ಹೆಚ್ಚಾಗಿರುವುದು ಸಂತಸದ ವಿಷಯವಾಗಿದೆ ಎಂದರು.

ಕೋವಿಡ್‌ ಸಮಯದಲ್ಲೂ ಸಾಯಿ ಕಲ್ಯಾಣ್‌ ನವರು 500 ಫ್ಲಾಟ್‌ಗಳ ನಿರ್ಮಾಣಕ್ಕೆ ಮುಂದಾಗಿರುವುದು ಬಹಳ ಅದ್ಭುತ ಕಾರ್ಯವೇ ಸರಿ. ಇಂತಹ ಯೋಜನೆಗಳಿಂದಲೇ ಬೆಂಗಳೂರು ನಗರದಲ್ಲಿ ಉದ್ಯೋಗಾವಕಾಶ ಹೆಚ್ಚುವ ಮೂಲಕ ರಾಜ್ಯ ಹಾಗೂ ದೇಶದ ಆರ್ಥಿಕತೆಗೆ ಉತ್ತೇಜನ ದೊರಕಲಿದೆ ಎಂದು ಹೇಳಿದರು. ಕೇಂದ್ರಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಸರಕಾರ ಅತ್ಯುತ್ತಮ ಕೆಲಸದಲ್ಲಿ ತೊಡಗಿಕೊಂಡಿದೆ. ಭಾರತೀಯ ಜನತಾ ಪಕ್ಷ ಕೆಲಸ ಮಾಡಿ ವೋಟ್‌ ಕೇಳುವ ಪಕ್ಷವಾಗಿದೆ. ಈ ಹಿನ್ನಲೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಗೆಲವು ಶತಸಿದ್ದ ಎಂದು ಇದೇ ಸಂಧರ್ಭದಲ್ಲಿ ತಿಳಿಸಿದರು.

ಸಾಯಿ ಕಲ್ಯಾಣ್‌ ಸಂಸ್ಥೆಯ ಅಧ್ಯಕ್ಷರಾದ ವೇಣುಗೋಪಾಲ್‌ ಮಾತನಾಡಿ, ಕೋವಿಡ್‌ ಸಂಧರ್ಭದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು ಹಾಗೂ ಕಡಿಮೆ ದರದಲ್ಲಿ ಉತ್ತಮ ದರ್ಜೆಯ ಫ್ಲಾಟ್‌ಗಳನ್ನು ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಎಸ್‌ಬಿಐ ಬ್ಯಾಂಕಿನ ಹಣಕಾಸಿನ ನೆರವಿನ ಮೂಲಕ ಈ ಯೋಜನೆಯನ್ನು ಪ್ರಾರಂಭಿಸಿದ್ದು ಕೈಗೆಟಕುವ ದರದಲ್ಲಿ ಫ್ಲಾಟ್‌ಗಳನ್ನು ನೀಡಲಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ 7 ನೇ ಪ್ರಾಜೆಕ್ಟ್‌ ಇದಾಗಿದ್ದು ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ, ಸಾಯಿ ಕಲ್ಯಾಣ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸುನೀಲ್ ಕುಮಾರ್‌‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here