ಸುರಪುರ: ಹೈದರಾಬಾದ ಕರ್ನಾಟಕ ಭಾಗದ ಜಿಲ್ಲೆಗಳ ಕಾಮಗಾರಿಗಾಗಿ ಬಿಡುಗಡೆಯಾಅದ ಹಣವನ್ನು ಕೆಬಿಜೆಎನ್‌ಎಲ್ ಅಧಿಕಾರಿಗಳು ಬೇಕಾಬಿಟ್ಟಿ ಖರ್ಚುಮಾಡಿದ್ದಾರೆ.ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಸರಕಾರಕ್ಕೆ ಒತ್ತಾಯಿಸಿದರು.
ನಗರದ ಮಡಿವಾಳ ಮಾಚಯ್ಯ ವೃತ್ತದಲ್ಲಿ ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಸರಕಾರ ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಹೈದರಾಬಾದ ಕರ್ನಾಟಕ ಭಾಗದ ಕಲಬುರ್ಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಕಾಮಗಾರಿಗಳಿಗಾಗಿ ಕರೆದ ಟೆಂಡರ್ ಹಣದಲ್ಲಿ ಗುತ್ತಿಗೆದಾರರು ಟೆಂಡರ್ ಮೊತ್ತಕ್ಕಿಂತ ಕಡಿಮೆ ಹಣದಲ್ಲಿ ಕಾಮಗಾರಿ ಮಾಡಿದ್ದು,ಸರಕಾರ ನಿಗದ ಪಡಿಸಿದ ಹಣದಲ್ಲಿ ಗುತ್ತಿಗೆದಾರರಿಗೆ ನೀಡಿ ಇನ್ನುಳಿದ ಹಣವನ್ನು ಇಲ್ಲಿಯ ಕಾಮಗಾರಿಗಳಿಗೆ ಖರ್ಚು ಮಾಡದೆ, ಸುಮಾರು ೫೬ ಕೋಟಿ ಹಣವನ್ನು ವಿಜಯಪುರ ಜಿಲ್ಲೆಗೆ ನೀಡಲಾಗಿದೆ.ಇದು ಈ ಭಾಗಕ್ಕೆ ಅಧಿಕಾರಿಗಳು ಮಾಡಿದ ಅನ್ಯಾಯ ಮತ್ತು ಅಕ್ರಮವಾಗಿ ಹಣ ನೀಡಿದ ಅಧಿಕಾರಿಗಳನ್ನು ಕೂಡಲೆ ಅಮಾನತ್ತು ಮಾಡಿ,ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿಬ್ಬಂದಿ ಮುಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ಕೃಷ್ಣಾ ದಿವಾಕರ,ವೇವಪ್ಪ ದೇವರಮನಿ,ಅಂಬಣ್ಣ ವೆಂಕಟಾಪೂರ ಸೇರಿದಂತೆ ಅನೇಕರಿದ್ದರು.