ಎಸ್ಟಿಗೆ ವಾಲ್ಮೀಕಿ ಸಮಾಜ ಬಿಟ್ಟು ಬೇರೆ ಸಮಾಜ ಸೇರಿಸಲು ನಾವು ಬಿಡಲ್ಲ: ವರದಾನಂದ ಶ್ರೀ ಎಚ್ಚರಿಕೆ

0
240

ಸುರಪುರ: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ೭.೫ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ನಗರದ ತಹಸೀಲ್ ಕಚೇರಿ ಮುಂದೆ ಸಾಂಕೇತಿಕ ಧರಣಿ ನಡೆಸಿದರು.

ಧರಣಿಯ ನೇತೃತ್ವ ವಹಿಸಿದ್ದ ಗೋಲಪಲ್ಲಿ ಶ್ರೀ ವಾಲ್ಮೀಕಿ ಗುರು ಪೀಠದ ವರದಾನೇಶ್ವರ ಸ್ವಾಮೀಜಿ ಮಾತನಾಡಿ,ನಮ್ಮ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ೭.೫ಕ್ಕೆ ಹೆಚ್ಚಿಸಲು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಸರಕಾರಗಳು ನಮಗೆ ವಂಚಿಸುತ್ತಿವೆ.ಇನ್ನು ಮುಂದೆ ನಮ್ಮ ಸಮುದಾಯ ಉಗ್ರ ಪ್ರತಿಭಟನೆಗೆ ಇಳಿಯಲಿದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ಅಲ್ಲದೆ ಇಂದು ಅನೇಕ ಸಮುದಾಯಗಳು ನಮ್ಮನ್ನು ಎಸ್ಟಿಗೆ ಸೇರಿಸಿ ಎಂದು ಕೇಳುತ್ತಿದ್ದಾರೆ.ಆದರೆ ಸರಕಾರ ಯಾವುದೇ ಸಮುದಾಯವನ್ನು ಎಸ್ಟಿಗೆ ಸೇರಿಸಲು ಬಿಡುವುದಿಲ್ಲ. ಯಾವುದೇ ಸಮುದಾಯ ತಮಗೆ ಮೀಸಲಾತಿ ಕೇಳಲಿ ಆದರೆ ಪರಿಶಿಷ್ಟ ಪಂಗಡವೇ ಯಾಕೆ ಬೇಕು,ಹಾಗೊಮ್ಮೆ ಎಸ್ಟಿ ಬೇಕೆನ್ನುವವರು ತಮ್ಮ ಜಾತಿಯನ್ನು ಬಿಟ್ಟು ನಮ್ಮ ಜಾತಿಗೆ ಸೇರಿಕೊಳ್ಳಲಿ ಎಂದು ವಿವಾದದ ಮಾತನಾಡಿದರು.

ನಂತರ ಅನೇಕ ಮುಖಂಡರು ಮಾತನಾಡಿ,ನಾವು ಮೀಸಲಾತಿ ಹೆಚ್ಚಳದ ಬಗ್ಗೆ ಸರಕಾರಕ್ಕೆ ಭಿಕ್ಷೆ ಕೇಳುತ್ತಿಲ್ಲ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ನೀಡಿರುವ ವರದಿಯಂತೆ ನಮಗೆ ೭.೫ ಮೀಸಲಾತಿಯನ್ನು ಹೆಚ್ಚಿಸಲು ಕೇಳುತ್ತಿದ್ದೇವೆ.ಬೆಂಗಳೂರಲ್ಲಿ ನಮ್ಮ ಜಗದ್ಗುರುಗಳು ನಡೆಸುತ್ತಿರುವ ಧರಣಿಗೆ ಮಣಿದು ನೀತಿ ಸಂಹಿತೆ ಮುಗಿದ ನಂತರ ನಮ್ಮಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಕೇಳಿದ್ದೇವೆ.ಹಾಗೊಮ್ಮೆ ನಮ್ಮ ಬೇಡಿಕೆ ಈಡೇರಿಸಲು ನಮ್ಮ ಉಗ್ರ ಪ್ರತಿಭಟನೆಯನ್ನು ಹೆದುರಿಸಲು ಸರಕಾರ ಸಜ್ಜಾಗಲಿ ಎಂದು ತಿಳಿಸಿದರು.ಅಲ್ಲದೆ ನಮ್ಮ ಸಮಾಜದ ಮೀಸಲಾತಿಯಿಂದ ಆರಿಸಿ ಬಂದ ಶಾಸಕರು ಮತ್ತು ಮಂತ್ರಿಗಳು ಸ್ವಾಭೀಮಾನವಿದ್ದರೆ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗುವಂತೆ ಆಗ್ರಹಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿ ನಂತರ ಧರಣಿ ಮುಂದುವರೆಸಿದರು.

ಧರಣಿಯಲ್ಲಿ ಮುಖಂಡರಾದ ರಾಜಾ ರಾಮಪ್ಪ ನಾಯಕ ಜೇಜಿ ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ವೆಂಕೋಬ ದೊರೆ ರಮೇಶ ದೊರೆ ಆಲ್ದಾಳ ವೆಂಕಟೇಶ ಬೇಟೆಗಾರ ರಾಮು ನಾಯಕ ಅರಳಳ್ಳಿ ಅಯ್ಯಣ್ಣ ಹಾಲಬಾವಿ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಭೀಮರಾಯ ಕಡಿಮನಿ ಶಿವರಾಜ ನಾಯಕ ನಾಗರಾಜ ಕಲಬುರ್ಗಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here