ಸುರಪುರ: ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಈ ನಾಡಿಗೆ ಬಳುವಳಿಯಾಗಿ ನೀಡಿದ ಶರಣ ಸಂಸ್ಕೃತಿ ಪ್ರಸ್ತುತ ಸಂದರ್ಭದಕ್ಕೆ ಅದರ ಪ್ರಸಾರ ಕಾರ್ಯ ಅತ್ಯಂತ ಅಗತ್ಯವಾಗಿದೆ ಎಂದು ನ್ಯಾಯವಾದಿ ಜಯಲಲಿತಾ ಪಾಟೀಲ್ ಹೇಳಿದರು.
ನಗರದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಶರಣ ಸೇವಾ ಸಂಸ್ಥೆಯ ಉದ್ಘಾಟನೆ ಹಾಗೂ ವೀರಮಾತೆ ಕಿತ್ತ್ತೂರಿನ ರಾಣಿ ಚನ್ನಮ್ಮಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬ್ರೀಟಿಷರ ವಿರುದ್ಧ ತೊಡೆತಟ್ಟಿ ಮಹಿಳಾ ಸಮುದಾಯವೇ ಹೆಮ್ಮೆ ಪಡುವ ನಿಟ್ಟಿನಲ್ಲಿ ಹೋರಾಟಮಾಡಿದ ಚನ್ನಮ್ಮಳ ಪರಾಕ್ರಮ ನಮ್ಮೆಲರಿಗೂ ಸ್ಪೂರ್ತಿಯಾಗಿದೆ ಜೊತೆಗೆ ಶರಣ ಸಂಸ್ಕೃತಿ ಸಾರಿದ ಬಸವಾದಿ ಶರಣರ ತತ್ವ ಚಿಂತನೆಗಳು ಕೂಡ ಸರ್ವಕಾಲಕ್ಕು ಪ್ರಸ್ತುತವಾಗಿವೆ ಎಂದು ಹೇಳಿದರು.
ಶರಣ ತತ್ವ ಮತ್ತು ಪ್ರಸ್ತುತತೆ ಕುರಿತು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಉಪನ್ಯಾಸ ನೀಡಿದರು. ತಾಲೂಕಾ ವೀರಶೈವ ಸಮಿತಿಯ ಉಪಾಧ್ಯಕ್ಷ ಶಿವರಾಜಪ್ಪ ಗೋಲಿಗೇರಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು, ಎ.ಪಿ.ಎಂ.ಸಿ ಸದಸ್ಯ ಮಲ್ಲಣ್ಣ ಸಾಹುಕಾರ ಮುಧೊಳ ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದರು.
ಸಮಾರಂಭದ ನೇತೃತ್ವ ವಹಿಸಿದ್ದ ಶರಣ ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರದೀಪ ಕದರಾಪುರ, ಕನಕ ಯುವ ಸೇನೆಯ ಮುಖಂಡ ರಂಗನಗೌಡ ಪಾಟೀಲ್ ದೇವಿಕೇರಿ, ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶಗೌಡ ಸುಭೇದಾರ ಸಗರ, ದೇವಾಪುರ ಗ್ರಾಮ ಪಂಚಾಯತ ಅಧ್ಯಕ್ಷ ಅಂಬ್ರೇಶ ದೇಸಾಯಿ, ಪ್ರಮುಖರಾದ ಶಾಂತರಾಜ ಬಾರಿ, ಮಂಜುನಾಥ ಗುಳಗಿ, ಚಂದ್ರಶೇಖರ ಡೊಣ್ನುರು, ವಿರೇಶ ಪಂಚಾಂಗಮಠ, ರವಿಗೌಡ ಹೆಮನೂರು, ರವಿಚಂದ್ರ ಕಲೀಕೆರಿ, ವಿರೇಶ ಹಳಿಮನಿ, ಮಲ್ಲು ಬಾದ್ಯಾಪುರ ಸೇರಿದಂತೆ ಇತರರಿದ್ದರು. ಪ್ರವೀಣ ಜಕಾತಿ ನಿರೂಪಿಸಿದರು, ಬಸವರಾಜ ಚನ್ನಪಟ್ನ ಸ್ವಾಗತಿಸಿದರು, ವೆಂಕಟೇಶ ಲಕ್ಷ್ಮೀಪೂರ ವಂದಿಸಿದರು.