ನಮೋಶಿಗೆ ಮತ ಚಲಾಯಿಸಲು ಮನವಿ

0
61

ಆಳಂದ: ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಶಿಕ್ಷಕ ಬಾಂಧವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ ನಮೋಶಿ ಅವರಿಗೆ ಮತ ಚಲಾಯಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮನವಿ ಮಾಡಿದರು.

ಶುಕ್ರವಾರ  ತಾಲೂಕಿನ ವಿವಿಧ ವಲಯದ ಮತಗಟ್ಟೆಯ ಪ್ರಭಾರಿಗಳು ಹಾಗೂ ಉಸ್ತುವಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಮಾತನಾಡಿ, ಶಶೀಲ ನಮೋಶಿಯವರು ಈ ಹಿಂದೆ ಮೂರು ಬಾರಿ ಆಯ್ಕೆಯಾದಾಗ ಶಿಕ್ಷಕರ ಹಿತ ಕಾಪಾಡಲು ಪ್ರಮಾಣಿಕ ಪ್ರಯತ್ನ ಪಟ್ಟಿದ್ದರು ಈ ಬಾರಿಯೂ ಅವರಿಗೆ ಆಯ್ಕೆ ಮಾಡುವುದರ ಮೂಲಕ ಶಿಕ್ಷಕರ ಕ್ಷೇತ್ರಕ್ಕೆ ಒಬ್ಬ ಅರ್ಹ ವ್ಯಕ್ತಿಯನ್ನು ಪ್ರತಿನಿಧಿಯನ್ನಾಗಿ ಮಾಡಬೇಕು ಎಂದು ಹೇಳಿದರು.

ಪಕ್ಷದ ಪ್ರಭಾರಿಗಳು, ಉಸ್ತುವಾರಿಗಳು ತಮಗೆ ವಹಿಸಿದ ಕೆಲಸವನ್ನು ಅತ್ಯಂತ ನಿಷ್ಟೆಯಿಂದ ನಿರ್ವಹಿಸುವುದರ ಮೂಲಕ ಪಕ್ಷಕ್ಕೆ ಸೇವೆ ಸಲ್ಲಿಸಬೇಕು. ಪ್ರತಿಯೊಬ್ಬ ಶಿಕ್ಷಕರನ್ನು ಭೇಟಿಯಾಗಿ ನಮೋಶಿಯವರ ಗೆಲುವಿಗೆ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿ.ಪ್ರ. ಕಾರ್ಯದರ್ಶಿ ಅಶೋಕ ಬಗಲಿ, ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೋರಳ್ಳಿ, ಸಂಜಯ ಮಿಸ್ಕಿನ್, ಗೌರಿ ಚಿಚಕೋಟಿ, ಮಲ್ಲಿಕಾರ್ಜುನ ಕಂದಗೂಳೆ, ಗುರುನಾಥ ಪಾಟೀಲ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here