ಕಲಬುರಗಿ: ನಗರ ಹೊರವಲಯದ ಕುಸನೂರ ತಾಂಡಾ ರಸ್ತೆಯಲ್ಲಿ ಕಲಬುರಗಿಯಿಂದ ನಂದೂರಗೆ ಹೋಗುವ ವಾಹನ ಸವಾರರನ್ನು ತಡೆದು ಬೆದರಿಸಿ ದರೋಡೆ ನಡೆಸಲು ಹೊಂಚು ಹಾಕಿದ್ದ 9 ಜನ ದರೋಡೆಕೋರರ ಪೈಕಿ ಪೈಕಿ 7 ಜನ ದರೋಡೆಕೋರರನ್ನು ಪೊಲೀಸರು ಬಂ ಧಿಸಿದ್ದಾರೆ.
ರಾಜಾಪುರದ ಕೃಷ್ಣ ನೀಲಕಂಠ ಪವಾರ, ದರೋಡೆ ಹೊಂಚು:೭ ಜನರ ಬಂಧನ ಶಿವ ಲಿಂಗೇಶ್ವರ ಬಸವಲಿಂಗಪ್ಪ ತಳವಾರ, ಸಂದೀಪ ಚವ್ಹಾಣ, ಗಣೇಶ ನಗರದ ಆಕಾಶ ನಾಗರಾಜ ಹಲಕಟ್ಟಿ, ವಿಶಾಲ ವಿಜಯಕುಮಾರ ರಾಠೋಡ್, ಕಾರ್ತಿಕ ಶ್ರೀಕಾಂತ, ಜಾಗೃತಿ ಕಾಲೋನಿಯ ಪೃಥ್ವಿ ರವೀಂದ್ರನಾಥ ಎಂಬುವರನ್ನು ಬಂಧಿಸಿ 3೦ ಸಾವಿರ ರೂಪಾಯಿ ಮತ್ತು 15 ಸಾವಿರ ರೂಪಾಯಿ ಮೌಲ್ಯದ ಎರಡು ಬೈಕ್, ಒಂದು ಕಾರು, ಖಾರದ ಪುಡಿ, ಬಿದಿರು ಬಡಿಗೆ, ಬ್ಯಾಟ್, ಪ್ಯಾಲೆಟ್ ಗನ್, ಹರಿತವಾದ ಆಯುಧ ಸೇರಿದಂತೆ 48500 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ರಘು ಕಲ್ಕೇರಿ ಮತ್ತು ಮಿಥುನ್ ಜಾಧವ್ ಎಂಬುವವರು ಪರಾರಿಯಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಿದ್ದಾರೆ.
ಇವರು ಮುಖಕ್ಕೆ ಕಪ್ಟುಪಟ್ಟಿ ಕಟ್ಟಿಕೊಂಡು ಕುಸನೂರ ತಾಂಡಾಕ್ಕೆ ಹೋಗುವ ರಸ್ತೆಯಲ್ಲಿ ಕಲಬುರಗಿಯಿಂದ ನಂದೂರಗೆ ಹೋಗುವ ವಾಹನ ಸವಾರರನ್ನು ತಡೆದು ಬೆದರಿಸಿ ದರೋಡೆ ನಡೆಸಲು ಹೊಂಚು ಹಾಕಿ ಕುಳಿತಿದ್ದಾರೆ ಎಂಬ ಮಾಹಿತಿ ಮೇಲೆ ನಗರ ಪೊಲೀಸ್ ಆಯುಕ ಉಪ ಪೊಲೀಸ್ ಆಯುಕ್ತ ಮತ್ತು ಎ ಉಪ ವಿಭಾಗದ ಎಸಿಪಿ ಅವರ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹದಳದ ಪಿಎಸ್‌ಐ ವಾಹಿದ್ ಹುಸೇನ್ ಕೋತ್ವಾಲ್ ಮತ್ತು ಸಿಬ್ಬಂದಿಗಳಾದ ಹುಸೇನ್ ಭಾಷಾ, ಮಲ್ಲಿಕಾರ್ಜುನ ಜಾನೆ, ಈರಣ್ಣ, ಭೀರಣ್ಣ, ಶ್ರೀಶೈಲ ಮತ್ತು ರಾಜಕುಮಾರ ಗಂಧೆ ಸೇರಿ ದಾಳಿ ನಡೆಸಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.