ಪ್ರವಾಹಕ್ಕೆ ತುತ್ತಾದ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದು ಭೇಟಿ: ವಿಶೇಷ ಅಧಿವೇಶ ಕರೆಯಲು ಆಗ್ರಹ

0
38

ಕಲಬುರಗಿ: ಭೀಕರ ಪ್ರವಾಹದಿಂದ ಹಾನಿಗಿಡಾದ ಅಫಜಲಪುರ ತಾಲೂಕಿನ ಸರಡಗಿ ಬ್ರಿಡ್ಜ್,  ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಬ್ರಿಡ್ಜ್, ಕಟ್ಟಿ ಸಂಗಾವಿ ಗ್ರಾಮಗಳಿಗೆ ಇಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.

ಇಂದು ಕಲಬುರಗಿ ನಗರದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಪ್ರವಾಹ ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ, ರಾಜ್ಯ ಸರಕಾರ ಶೀಘ್ರ ಅತಿವೃಷ್ಠಿ ಕುರಿತು ಚರ್ಚೆ ನಡೆಸಲು ವಿಶೇಷ  ಅಧಿವೇಶನ ಕರೆಯಬೇಕೆಂದು ಎಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಭೀಮಾ ನದಿಯ ಭೀಕರ ಪ್ರವಾಹ ದಿಂದಾಗಿ ಹಾನಿಗೊಳಗಾದ ಬೆಳೆ, ಜನ ಜಾನುವಾರುಗಳ ಸುರಕ್ಷತೆ ಇನ್ನು ಹತ್ತು ಹಲವು ಸಮಸ್ಯಗಳ ಕುರಿತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಜೊತೆ ಜೇವರ್ಗಿಯ ಶಾಸಕ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಗದೇವ್ ಗುತ್ತೇದಾರ್, ಕಲಬುರಗಿ ಜಿಲ್ಲೆಯ ಶಾಸಕರಾದ ಎಮ್.ವೈ. ಪಾಟೀಲ್, ಕನೀಜ್ ಫಾತೀಮ, ಶಹಪುರನ ಶಾಸಕರಾದ ಶರಣಬಸಪ್ಪ ದರ್ಶನಾಪುರ್ ,ಮುಖಂಡರಾದ ಬಿ.ಆರ್. ಪಾಟೀಲ್, ಶರಣ ಪ್ರಕಾಶ ಪಾಟೀಲ್, ತಿಪ್ಪಣಪ್ಪ ಕಮಕನೂರ್, ಅಲ್ಲಮ ಪ್ರಭು ಪಾಟೀಲ್ ,ಚಂದ್ರಶೇಖರ್ ಪಾಟೀಲ್ ಹುಮ್ನಾಬಾದ ,ವಿಜಯ್ ಜಿ.ರಾಮಕೃಷ್ಣ, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮಾಧ್ಯಮದ ಮಿತ್ರರು ಹಾಜರಿದ್ದರು,

ಗೋಷ್ಠಿಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶರಣಪ್ಪ ಮಟ್ಟೂರ್ ಪರ ಮತ ಯಾಚನೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here