ಡಾ.ಸಿ ಆರ್ ಚಂದ್ರಶೇಖರ ಅವರ ಸೇವೆ ಮಾನವೀಯತೆಗೆ ಹಿಡಿದ ಕನ್ನಡಿ

0
35

ಆಳಂದ: ಬಸವಾದಿ ಶರಣರ ಆಶಯದಂತೆ ಬದುಕಿ ತಮ್ಮ ಜೀವನದುದ್ದಕ್ಕೂ ಅದನ್ನು ಪಾಲಿಸಿಕೊಂಡು ಬಂದು ನಿರಂತರ ಅಧ್ಯಾಪನ, ಅಧ್ಯಯನದಲ್ಲಿ ತೊಡಗಿರುವ ಖ್ಯಾತ ಮನೋವಿಜ್ಞಾನಿ ಡಾ. ಸಿ ಆರ್ ಚಂದ್ರಶೇಖರ ಅವರ ಸೇವೆ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು, ಕಲಬುರಗಿ ಹಾಗೂ ಷಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್, ಕಲಬುರ್ಗಿ ಇವರ ಸಹಯೋಗದಲ್ಲಿ ಜನಸ್ನೇಹಿ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ ಅವರಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಆನ್‌ಲೈನ್ ನುಡಿಗೌರವ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ನುಡಿಗೌರವ ಸಲ್ಲಿಸಿದರು.

Contact Your\'s Advertisement; 9902492681

ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗಾಗಿ ತನು, ಮನ, ಧನ ಅರ್ಪಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ನುಡಿದಂತೆ ನಡೆಯುವ ವ್ಯಕ್ತಿಗಳಲ್ಲಿ ಅವರೊಬ್ಬರಾಗಿದ್ದಾರೆ ಎಂದು ಹೇಳಿದರು.

ನಾಡೋಜ ಡಾ. ಪಿ ಎಸ್ ಶಂಕರ ಮಾತನಾಡಿ, ಅವರ ಸಾಮೀಪ್ಯ ದೊರೆತಿರುವುದು ನಮ್ಮ ಸೌಭಾಗ್ಯ ಅವರ ಸಹಾಯದಿಂದ ವೈದ್ಯ ವಿಶ್ವಕೋಶ ರಚನೆಯಾಗಿದೆ. ಒತ್ತಡವನ್ನು ನಿಯಂತ್ರಿಸಿಕೊಳ್ಳುವಲ್ಲಿ ಅವರ ಪುಸ್ತಕಗಳು ಸಹಕಾರಿಯಾಗಿವೆ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಸಿಆರ್‌ಸಿ ಅವರ ಸಹಾಯದಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅನೇಕ ಆಪ್ತ ಸಮಾಲೋಚನಾ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದಾರೆ ಇದರಿಂದ ಅನೇಕರ ಒತ್ತಡ ನಿವಾರಿಸುವ ಪ್ರಯತ್ನ ಮಾಡಲಾಗಿದೆ ಹೀಗಾಗಿ ಅವರ ಸೇವೆ ನಮಗೆ ಸಿಕ್ಕಿರುವುದು ಬಹು ದೊಡ್ಡ ಉಪಕಾರ ಎಂದು ತಿಳಿಸಿದರು.

ಅಪ್ಪಾರಾವ ಅಕ್ಕೋಣಿ, ಪ್ರೊ. ಆರ್ ಕೆ ಹುಡಗಿ, ಟಿ ವಿ ಸಿವಾನಂದನ್, ಸುಭಾಷಚಂದ್ರ ಪಾಟೀಲ, ಶ್ರೀನಿವಾಸ ಮೂರ್ತಿ, ಡಾ. ಎಫ್ ಹೆಚ್ ಯೋಗಪ್ಪನವರ್, ಶೀಲಾಕಾಂತ ಪತ್ತಾರ, ಶಿವರಾಜ ಪಾಟೀಲ ಸೇರಿದಂತೆ ಇತರರು ನುಡಿಗೌರವ ಸಲ್ಲಿಸಿದರು.

ಎಸ್ ಎಸ್ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರೆ, ಕುಮಾರ ಕಣವಿ ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here