ಸುರಪುರ: ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಅವರ ಸುಪುತ್ರರ ಹುಟ್ಟು ಹಬ್ಬದ ಅಂಗವಾಗಿ 5 ಸಾವಿರ ಮಾಸ್ಕ್ ಹಾಗೂ ಎಲ್ಲಾ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಣ್ಣು ಹಾಲು ವಿತರಣಣೆ ಮಾಡಿದರು.
ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ರ ಸುಪುತ್ರ ಯುವ ಮುಖಂಡ ರಾಜಾ ರೂಪಕುಮಾರ ನಾಯಕ ಅವರ 40ನೇ ಜನುಮ ದಿನದ ಅಂಗವಾಗಿ 5 ಸಾವಿರ ಮಾಸ್ಕ್ ವಿತರಿಸುವ ಮೂಲಕ ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಜನುಮ ದಿನ ಆಚರಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತ ಕುಂಬಾರ ಪೇಟೆಯ ವೃತ್ತ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸೇರಿದ ಅನೇಕರು ನಗರದ ಹಾಗೂ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನರಿಗೆ ಮಾಸ್ಕ್ ನೀಡಿ ಸದಾಕಾಲ ಮಾಸ್ಕ್ ಧರಿಸುವಂತೆ ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ರಾಜಾ ರೂಪಕುಮಾರ್ ನಾಯಕ ಅವರ ಅಭಿಮಾನಿ ಶರಣು ನಾಯಕ ದೇವರಗೋನಾಲ ಮಾತನಾಡಿ, ರಾಜಾ ರೂಪಕುಮಾರ ನಾಯಕ ಅವರ ಜನುಮ ದಿನದ ಅಂಗವಾಗಿ ನಗರದಾದ್ಯಂತ ಎಲ್ಲೆಡೆ 5 ಸಾವಿರ ಮಾಸ್ಕ್ ವಿತರಿಸಲಾಗುತ್ತಿದೆ ಜೊತೆಗೆ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಶ್ರಮಿಸಲಾಗುತ್ತಿದೆ.ಜೊತೆಗೆ ನಗರದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ಹಾಲು ವಿತರಿಸುವ ಮೂಲಕ ಜನರ ನೆರವಾಗುವ ಮೂಲಕ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ರಾಜಾ ಕುಮಾರ್ ನಾಯಕ ರಾಜಾ ಶುಶಾಂತ ನಾಯಕ ಎಪಿಎಂಸಿ ಸದಸ್ಯ ಮಲ್ಲಣ್ಣ ಮುಧೋಳ ನಗರಸಭೆ ಸದಸ್ಯ ಜುಮ್ಮಣ್ಣ ಶರಣು ಕಳ್ಳಿಮನಿ ಶರಣು ಮುಧೋಳ ನರಸಿಂಹಪೇಟ ರಮೇಶ ಅರಕೇರಿ ಆನಂದ ಮುಧೋಳ ಮಾನಪ್ಪ ಪ್ಯಾಪ್ಲಿ ಭೀಮು ಸೇರಿದಂತೆ ಅನೇಕರಿದ್ದರು.