ಶಿಕ್ಷಕರ ಮತಕ್ಷೇತ್ರದ ಚುನಾವಣೆ:ಶೇ.73.32 ರಷ್ಟು ಮತದಾನ: ಡಾ. ಎನ್.ವಿ. ಪ್ರಸಾದ್

0
71

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದಿಂದ ಬುಧವಾರ ನಡೆದ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 73.32 ರಷ್ಟು ಮತದಾನವಾಗಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ಡಾ. ಎನ್.ವಿ. ಪ್ರಸಾದ್ ಅವರು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಮತ ಚಲಾಯಿಸಲು ಹಕ್ಕು ಹೊಂದಿದ ಒಟ್ಟು 29236 ಮತದಾರ ಪೈಕಿ 21436 ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ 15058 ಪುರುಷರು ಹಾಗೂ 6378 ಮಹಿಳಾ ಮತದಾರರು ಇದ್ದಾರೆ. ಲಿಂಗವಾರು ಮತದಾನದ ಪ್ರಮಾಣ ನೋಡಿದಾಗ ಪುರುಷರ ಪ್ರಮಾಣ ಶೇ. 79.47 ಇದ್ದರೆ ಮಹಿಳೆಯರ ಪ್ರಮಾಣ ಶೇ. 62.01 ರಷ್ಟಿದೆ ಎಂದರು.

Contact Your\'s Advertisement; 9902492681

ಜಿಲ್ಲಾವಾರು ಮತದಾನದ ವಿವರ ಇಂತಿದೆ. ಕಲಬುರಗಿ ಜಿಲ್ಲೆಯಲ್ಲಿ ಶೇ. 67.72, ಯಾದಗಿರಿ ಶೇ. 81.59, ರಾಯಚೂರು ಶೇ. 74.97, ಬೀದರ ಶೇ. 74.40, ಬಳ್ಳಾರಿ ಶೇ. 74.34 ಹಾಗೂ ಕೊಪ್ಪಳ ಶೇ. 80.86 ರಷ್ಟು ಮತದಾನವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here