ಮತಗಟ್ಟೆ ಮುಂದೆ ಬಿಜೆಪಿ-ಕಾಂಗ್ರೆಸ್ ಫೋಟೊ ಸಂಭ್ರಮ: ವಾಡಿ: ಶೇ.77 ಮತದಾನ

0
58

ವಾಡಿ: ಅತ್ತ ಶಿಕ್ಷಕರ ಈಶಾನ್ಯ ಮತಕ್ಷೇತ್ರದ ಚುನಾವಣಾ ಕಣದಲ್ಲಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಪರಸ್ಪರ ಗೆಲ್ಲುವ ಪೈಪೋಟಿ ನಡೆಸುತ್ತಿದ್ದರೆ, ಇತ್ತ ಬಿಜೆಪಿ-ಕಾಂಗ್ರೆಸ್ ಮುಖಂಡರು ಮತದಾನ ಕೇಂದ್ರದ ಮುಂದೆ ಸಾಮೂಹಿಕವಾಗಿ ಪೋಟೊ ಕ್ಲಿಕ್ಕಿಸಿಕೊಳ್ಳುವ ಮೂಲಕ ರಾಜಕೀಯ ಮಿತ್ರತ್ವ ಪ್ರದರ್ಶಿಸಿದ ಪ್ರಸಂಗ ಪಟ್ಟಣದಲ್ಲಿ ನಡೆಯಿತು.

ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತದಾನ ಕೇಂದ್ರ ಸಂಖ್ಯೆ-೯೪ಕ್ಕೆ ಮತದಾನ ದಿನವಾದ ಬುಧವಾರ ಸಂಜೆ ೪:೦೦ ಗಂಟೆಗೆ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ಬಿಜೆಪಿ ನಾಯಕಿ ಶಶಿಕಲಾ ಟೆಂಗಳಿ ಅವರು ಮತದಾನ ಪ್ರಕ್ರಿಯೆ ವೀಕ್ಷಿಸಿದ ಬಳಿಕ ಮತಗಟ್ಟೆ ಸುತ್ತಮುತ್ತ ಸೇರಿದ್ದ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆಗಿಳಿದರು. ಚುನಾವಣೆ ವೇಳೆ ಕಾಂಗ್ರೆಸ್-ಬಿಜೆಪಿ ಎಂದು ಹೋರಾಡಿದ್ದೇವೆ. ಈಗ ಮತದಾನ ಪ್ರಕ್ರಿಯೆ ಕೊನೆಗೊಳ್ಳುವ ಹಂತಕ್ಕೆ ಬಂದಿದೆ. ಇಲ್ಲಿ ಯಾರೇ ಗೆಲ್ಲಲಿ. ಪರಸ್ಪರ ಸಹಕಾರ ಭಾವದಿಂದ ಶಿಕ್ಷಕರ ಸೇವೆ ಮಾಡೋಣ. ನಾವು ರಾಜಕೀಯ ಶತ್ರುತ್ವ ಮರೆಯದೆ ರಾಜಕೀಯ ಮಿತ್ರತ್ವದಿಂದ ರಾಜ್ಯ ಕಟ್ಟೋಣ ಎಂದು ಹೇಳುವ ಮೂಲಕ ಮತದಾನ ಕೇಂದ್ರದ ಮುಂದೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರೊಂದಿಗೆ ಸಾಮೂಹಿಕವಾಗಿ ಫೋಟೊ ಕ್ಲಿಕ್ಕಿಸಿಕೊಂಡು ಗಮನ ಸೆಳೆದರು.

Contact Your\'s Advertisement; 9902492681

ಹಕ್ಕು ಚೆಲಾಯಿಸಿದ ಶಿಕ್ಷಕರು: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಬುಧವಾರ ನಡೆದ ಮತಾದನ ಪ್ರಕ್ರಿಯೆಯಲ್ಲಿ ವಾಡಿ ನಗರದ ಸರಕಾರಿ ಹಿರಿಯ ಕನ್ಯಾ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ-೯೪ರಲ್ಲಿ ಪುರುಷ ಮತದಾರರು-೫೭ ಹಾಗೂ ಮಹಿಳಾ ಮತದಾರರು-೩೮ ಸೇರಿದಂತೆ ಒಟ್ಟು ೯೫ ಮತದಾರರ ಪೈಕಿ ೪೩ ಜನ ಪುರುಷರು ಮತ್ತು ೩೦ ಜನ ಮಹಿಳಾ ಮತದಾರರು ಸೇರಿದಂತೆ ಒಟ್ಟು ೭೩ ಜನರು ತಮ್ಮ ಹಕ್ಕು ಚೆಲಾಯಿಸಿದರು. ಶೇ.೭೬.೮೪ ರಷ್ಟು ಮತದಾನವಾಗಿದೆ ಎಂದು ಮತದಾನ ಕೇಂದ್ರದ ಅಧಿಕಾರಿ, ಸಿಆರ್‌ಪಿ ಮಲ್ಲಿನಾಥ ಕುನ್ನೂರ ತಿಳಿಸಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಶಾಂತಿಯಿಂದ ಮತದಾನ ನಡೆಯಿತು.

ರಾಯಚೂರು ಕೃಷಿ ವಿವಿ ಮಾಜಿ ನಿರ್ದೇಶಕ, ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣಗೌಡ ಪರಸರೆಡ್ಡಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ವಾಡಿ-ಶಹಾಬಾದ ನಗರ ಯೋಜನೆ ಪ್ರಾದೀಕಾರ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ, ಹಿರಿಯ ಮುಖಂಡ ಟೋಪಣ್ಣ ಕೋಮಟೆ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಮದರಿ ಹಾಗೂ ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಮಹಿಳಾ ಮೋರ್ಚಾ ಜಿಲ್ಲಾ ಜಂಟಿ ಕಾರ್ಯದರ್ಶಿ ನಿವೇದಿತಾ ದಹಿಹಂಡೆ, ವಿಠ್ಠಲ ನಾಯಕ, ಗಿರಿಮಲ್ಲಪ್ಪ ಕಟ್ಟಿಮನಿ, ಪರುತಪ್ಪ ಕರದಳ್ಳಿ, ಕಿಶನ ಜಾಧವ, ಹರಿ ಗಲಾಂಡೆ, ರಿಚ್ಚರ್ಡ್ ಮರೆಡ್ಡಿ ಸೇರಿದಂತೆ ಅನೇಕ ಜನ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಮತದಾನ ಕೇಂದ್ರದ ಸುತ್ತಮುತ್ತ ಗಸ್ತು ತಿರುಗುವ ಮೂಲಕ ಶಿಕ್ಷಕರ ಮನವೊಲಿಸುವ ಪ್ರಯತ್ನ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here