ಸುರಪುರ: ಈ ವರ್ಷ ರಾಜ್ಯದಲ್ಲಿ ಕೊರೊನಾ ಹಾವಳಿಯಿದೆ ಅಲ್ಲದೆ ನೆರೆ ಹಾವಳಿಯಿಂದಾಗಿ ಜನಸಾಮಾನ್ಯರು ಹಾಗು ರೈತರು ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಆದ್ದರಿಂದ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ತಿಳಿಸಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ಸಭೆ ನಡೆಸಿ ಮಾತನಾಡಿ,ಕರವೇ ವತಿಯಿಂದ ಹಿಂದಿನಿಂದಲೂ ವಿಜೃಂಭಣೆಯಿಂದ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುತ್ತಾ ಬರಲಾಗಿದೆ.ಆದರೆ ಈ ವರ್ಷ ಇಡೀ ನಾಡೇ ಇಂದು ಸಂಕಷ್ಟದಲ್ಲಿದೆ,ಇಂತಹ ಸಂದರ್ಭದಲ್ಲಿ ಅದ್ಧೂರಿ ಕಾರ್ಯಕ್ರಮದ ಬದಲಾಗಿ ಜನರ ನೆರವಿಗೆ ನಿಲ್ಲೋಣ.ಎಲ್ಲರು ನಿಮ್ಮ ನಿಮ್ಮ ಗ್ರಾಮಗಳಲ್ಲಿ ಸರಳವಾಗಿ ರಾಜ್ಯೋತ್ಸವ ಆಚರಿಸುವಂತೆ ತಿಳಿಸಿದರು.ನಂತರ ಜಾಲಿಬೆಂಚಿ ಗ್ರಾಮ ಶಾಖೆಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಪದಾಧಿಕಾರಿಗಳು: ರಾಜಾ ಅಮರಪ್ಪ ನಾಯಕ ಜಹಾಗೀರದಾರ ಗೌರವಾಧ್ಯಕ್ಷ ಭೀಮು ನಾಯಕ ಅಧ್ಯಕ್ಷ ಪ್ರವೀಣ ಕುಮಾರ ಉಪಾಧ್ಯಕ್ಷ ಬಸವರಾಜ ಸೆಕ್ರಟರಿ ಪ್ರಧಾನ ಕಾರ್ಯದರ್ಶಿ ಕಾಶೀನಾಥ ಮರಾಠ ಸಹ ಕಾರ್ಯದರ್ಶಿ ಫಾರುಕ್ ಪಟೇಲ್ ಸಂಘಟನಾ ಕಾರ್ಯದರ್ಶಿ ಶರಣು ಬಳಿ ಸಹ ಸಂಘಟನಾ ಕಾರ್ಯದರ್ಶಿ ರವಿಕುಮಾರ ಕಾಮತ್ ಪ್ರಧಾನ ಸಂಚಾಲಕ ಮಲ್ಲು ಮಡಿವಾಳ ಸಂಚಾಲಕ ಹಾಗು ಅಂಬರೀಶ ಸಾಹುಕಾರ ಖಜಾಂಚಿಯಾಗಿ ನೇಮಕಗೊಳಿಸಲಾಯಿತು.
ಸಭೆಯಲ್ಲಿ ಮುಖಂಡರುಗಳಾದ ಶಿವಮೋನಯ್ಯ ಎಲ್.ಡಿ.ನಾಯಕ ಅಂಬ್ಲಯ್ಯ ಬೇಟೆಗಾರ ಶ್ರೀನಿವಾಸ ಡಿ.ನಾಯಕ ಹಣಮಂತ ಹಾಲಗೇರಾ ಪ್ರಕಾಶ ಹೆಗ್ಗಣದೊಡ್ಡಿ ನೀಲಕಂಠಗೌಡ ಪ್ರಕಾಶ ಮಾರಲಬಾವಿ ಶ್ರೀಶೈಲ ಕಾಚಾಪುರ ಬಾವಸಾಬ್ ನದಾಫ್ ಕೃಷ್ಣಾ ಪರಸನಹಳ್ಳಿ ಸೇರಿದಂತೆ ಅನೇಕರಿದ್ದರು.