ಸುರಪುರ: ವಿವಿಧ ಕಚೇರಿಗಳಲ್ಲಿ ಲೋಕಾಯುಕ್ತದಿಂದ ಭ್ರಷ್ಟಾಚಾರ ಜಾಗೃತಿ

0
30

ಸುರಪುರ: ಸರಕಾರಿ ಅಧಿಕಾರಿಗಳು ಲಂಚದಂತಹ ಭಷ್ಟಾಚಾರ ನಡೆಸುವುದು ಅಪರಾಧಚಾಗಿದೆ,ಅಂತಹ ಅಧಿಕಾರಿಗಳು ಒಂದಿಲ್ಲೊಂದು ದಿನ ಅವರು ಲೋಕಾಯುಕ್ತ ಬಲೆಗೆ ಬೀಳುತ್ತಾರೆ. ಇದರಿಂದ ಅಧಿಕಾರಿಗಳ ಮಾರ್ಯಾದೆ ಹೋಗಿ ಸೇವೆಯಿಂದಲೂ ಅಮಾನತ್ತು ಅಥವಾ ನೌಕರಿಯಿಂದಲೂ ವಜಾಗೊಳ್ಳುವ ಸಂದರ್ಭವು ಬರಬಹುದು ಎಂದು ಲೋಕಾಯುಕ್ತ ಇನ್ಸ್ಪೇಕ್ಟರ್ ಗುರುರಾಜ ಕಟ್ಟಿಮನಿ ತಿಳಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಭ್ರಷ್ಟಾಚಾರ ಜಾಗೃತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿ,ಸರ್ಕಾರಿ ನೌಕರರಲ್ಲಿ ಭ್ರಷ್ಟಾಚಾರದ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಜಾಗೃತಿ ಅರಿವು ಸಪ್ತಾಹ ಆಚರಿಸುತ್ತಿದೆ. ಈ ದಿಸೆಯಲ್ಲಿ ಸಂಸ್ಥೆ ಪ್ರತಿ ತಾಲ್ಲೂಕಿನ ಪ್ರಮುಖ ಕಚೇರಿಗಳಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

Contact Your\'s Advertisement; 9902492681

ಜನರನ್ನು ವ್ಯಥಾ ಅಲೆಸದೆ ಸರಿಯಾದ ಸಮಯಕ್ಕೆ ಅವರ ಕೆಲಸಗಳನ್ನು ಮಾಡಿಕೊಡಿ. ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡಬೇಡಿ. ಪಾರದರ್ಶಕ ಆಡಳಿತ ನೀಡಿ. ಭ್ರಷ್ಟಾಚಾರ ಮುಕ್ತವಾಗಿ ಕೆಲಸ ನಿರ್ವಹಿಸಿ’ ಎಂದು ಅವರು ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡವರು ಅನುಭವಿಸಿದ ಶಿಕ್ಷಯೆ ಬಗ್ಗೆ ಸಂಸ್ಥೆಯಲ್ಲಿ ದಾಖಲಾದ ಪ್ರಕರಣಗಳನ್ನು ವಿವರಿಸಿ ಎಚ್ಚರಿಸಿದರು.

ನಗರದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲ್ಲೂಕು ಸರ್ಕಾರಿ ಆಸ್ಪತ್ರೆ, ತಾಲ್ಲೂಕು ಪಂಚಾಯಿತಿ ಕಚೇರಿಗಳಲ್ಲೂ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಯಿತು.

ತಹಶೀಲ್ದಾರ್ ನಿಂಗಣ್ಣ ಬಿರಾದಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ, ವೈದ್ಯರಾದ ಡಾ. ಹರ್ಷವರ್ಧನ್ ರಫುಗಾರ, ಡಾ. ಚೌಧರಿ, ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಚ್.ಎಸ್. ರಾಘವೇಂದ್ರ, ರಾಮನಗೌಡ, ವಿಷ್ಣು, ರಾಜೇಸಾಬ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here