ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ತಾಲೂಕಾಧ್ಯಕ್ಷರ ನೇಮಕ

0
106

ಕಲಬುರಗಿ: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ತಾಲೂಕು ಘಟಕಗಳ ನೂತನ ಅಧ್ಯಕ್ಷರಗಳನ್ನು ೨೦೨೦ ರಿಂದ ೨೦೨೫ ನೇ ಸಾಲಿಗಾಗಿ ಬರುವ ಐದು ವರ್ಷಗಳ ಅವಧಿಗಾಗಿ ನಗರದ ಶ್ರೀ ಶರಣಬಸವೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಯಿತು.

ಪರಿಷತ್ತಿನ ಜಿಲ್ಲೆಯ ಅಫಜಲಪೂರ ಅಧ್ಯಕ್ಷರಾಗಿ ಗುರುರಾಜ ಆಹೇರಿ, ಆಳಂದ ಅಣ್ಣಾರಾಯ ಬಿರಾದಾರ, ಚಿಂಚೋಳಿ ಬಸವರಾಜ ಐನೋಳ್ಳಿ, ಚಿತ್ತಾಪೂರ ವೀರಭದ್ರಪ್ಪ ಪಾಟೀಲ್, ಕಲಬುರಗಿ ದಕ್ಷಿಣ ವಿಲಾಸರಾವ ಸಿನ್ನೂರಕರ್, ಕಲಬುರಗಿ ಉತ್ತರ ಶ್ರೀನಿವಾಸ ನಾಲವಾರ, ಜೇವರ್ಗಿ ನಾನಾಗೌಡ ಕೂಡಿ, ಸೇಡಂ ಗಂಗಾಧರ ಗೌಳಿ, ಶಹಾಬಾದ ವೆಂಕಟೇಶ ಚಿನ್ನೂರ, ಕಮಲಾಪೂರ ಚಂದ್ರಕಾಂತ ಬಿರಾದಾರ, ಕಾಳಗಿ ಶಿವಕುಮಾರ ಬಿರಾದಾರ, ಯಡ್ರಾಮಿ ಅಲ್ಲಾಪಟೇಲ್ ಚಿಂಚೋಳಿ ಅವರು ನೇಮಕ ಗೊಂಡಿದ್ದಾರೆ.

Contact Your\'s Advertisement; 9902492681

ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಪಿ.ಮಹೇಶ ಮೈಸೂರ ಅವರ ಮಾರ್ಗದರ್ಶನದಲ್ಲಿ ಪರಿಷತ್ತಿನ ನೂತನ ತಾಲೂಕು ಘಟಕಗಳನ್ನು ರಚಿಸುವ ಮೂಲಕ ಜಿಲ್ಲೆಯಲ್ಲಿ ಪರಿಷತ್ತನ್ನು ಬಲಪಡಿಸಲಾಗುವುದು ಎಂದು ನೂತನ ಜಿಲ್ಲಾಧ್ಯಕ್ಷ ಗುರುಪಾದ ಕೋಗನೂರು ಅವರು ಹೇಳಿದರು.

ಉಪಾಧ್ಯಕ್ಷರಾಗಿ ರಾಜೇಂದ್ರ ಕೆ.ಝಳಕಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಬಿ.ಸಾಗರ, ಕಾರ್ಯದರ್ಶಿಯಾಗಿ ಮಹೇಶ ಹೂಗಾರ, ಖಜಾಂಚಿಯಾಗಿ ಎಸ್.ವಿಶಾಲಾಕ್ಷಿ, ಜಿಲ್ಲಾ ಸಹ ಕಾರ್ಯದರ್ಶಿಗಳಾದ ವೀರಸಂಗಪ್ಪ ಸೂಲೆಗಾಂವ, ಶಿವಾನಂದ ಧಾನಮ ಗುಡಿ, ಧರ್ಮಣ್ಣ ಧನ್ನಿ, ರಾಜಶೇಖರ ಬಿರಾದಾರ, ಸಾವಿತ್ರಿ ಪಾಟೀಲ್ ಸಂಘಟನಾ ಕಾರ್ಯದರ್ಶಿಗಳಾದ ಪರಮೇಶ್ವರ ವಾಗ್ದರ್ಗಿ, ವೆಂಕಟರಡ್ಡಿ, ಜಾಕೀರ ಹುಸೇನ ಕಪನೂರ, ಮಡಿವಾಳಪ್ಪ ಆಲಗೂಡ, ಧೇನು ರಾಠೋಡ, ಮಲ್ಲಿಕಾರ್ಜುನ ಮಾಳಗಿ, ಎಂಡಿ.ರಫೀಕ್, ಅರುಣ ಎಫ್ ಸವದತ್ತಿ, ಗಂಗಮ್ಮ ನಾಲವಾರ, ವಿಜಯಶ್ರೀ ಹಿರೇಮಠ, ಶ್ರೀಮತಿ ಭಂಡಾರಿ, ರೇಣುಕಾ ಎನ್, ಸಾವಿತ್ರಾ ಪತ್ತಾರ, ಸುನಂದ ಬಿ.ಆನಕಲ್, ತನುಜಾ ಕುಲಕರ್ಣಿ ಇದ್ದರು.
ನಿಟ್ ಪರಿಕ್ಷೇಯಲ್ಲಿ ೭೨೦ ಅಂಕಗಳಿಗೆ ೬೫೦ ಅಂಕ ಪಡೆದ ಕುಮಾರ ಈಶ್ವರ ಉಡಗಿ ಇವರನ್ನು ಸನ್ಮಾನಿಸಲಾಯಿತು.

ನಂತರ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸುರೇಖಾ ಡೆಂಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಾದ ರೇಣುಕಾ ಎನ್, ಚಂದ್ರಕಾಂತ ಬಿರಾದಾರ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸೇವಂತಾಬಾಯಿ ಚವ್ಹಾಣ, ಸಾವಿತ್ರಿ ಪಾಟೀಲ್, ವಿಶಾಲಾಕ್ಷಿ ಎಸ್, ಗಂಗಮ್ಮ ನಾಲವಾರ ಇವರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here