ಕಲಬುರಗಿ: ರಾಜ್ಯ ಚುನಾವಣಾ ಇತಿಹಾಸದಲ್ಲೆ ಮೊದಲ ಬಾರಿಗೆ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಮನೆಯಿಂದಲೇ ಮತ ಚಲಾವಣೆ ಮಾಡುವ ವಿಶೇಷ ಅವಕಾಶದ ಯೋಗ ಒದಗಿಸಿದೆ.
ಚುನಾವಣಾ ಅಯೋಗದ ಕ್ರಮದಿಂದ ರಾಜ್ಯದಲ್ಲಿರುವ ಎಲ್ಲಾ ಹಿರಿಯ ನಾಗರಿಕರಿಗೆ ಹಾಗೂ ವಿವಿಧ ರೀತಿಯ ದಿವ್ಯಾಂಗರು ಮನೆಯಿಂದ ಮತ ಚಲಾಯಿಸುವ ಸದಾವವಕಾಶ ಸಿಕ್ಕಂತಾಗಿದೆ.
ಚುನಾವಣಾ ಆಯೋಗದ ಈ ಕ್ರಮಕ್ಕೆ ಡಿಸೆಬಲ್ಡ ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಹರ್ಷ ವ್ಯಕ್ತಪಡಿಸಿದರು.