ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತೋತ್ಸವ ಆಚರಣೆ

0
60

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ವತಿಯಿಂದ ದೇಶದ ಮೊದಲನೇ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಗಳಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಜಯಂತೋತ್ಸವವನ್ನು ಇಂದು ಪಟೇಲ್ ವೃತದಲ್ಲಿ ಅತಿ ಸಂಭ್ರಮದಿಂದ ಆಚರಿಸಲಾಯಿತು.

ಮೊಟ್ಟ ಮೊದಲು ಗಣ್ಯರಿಂದ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತ್ನಾಡಿದ ದಿನಾಚರಣೆ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ ದಸ್ತಿ ಯವರು ಈ ಧೀಮಂತ ಮಹಾ ನಾಯಕನ ದಿನಾಚರಣೆ ಸರಕಾರದಿಂದ ಆಚರಿಸಲು ನಮ್ಮ ಭಾಗದ ಸಚಿವರು ಸೇರಿದಂತೆ ಕೆ.ಕೆ.ಆರ್ ಡಿ.ಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೆವೋರರವರು ಕಲ್ಯಾಣ ಕರ್ನಾಟಕದ ಸಂಸದರು, ಶಾಸಕರುಗಳನ್ನು ಅಭಿಪ್ರಾಯಕ್ಕೆ ತೆಗೆದುಕೊಂಡು ಬರುವ ವರ್ಷದಿಂದ ಈ ದಿನಾಚರಣೆ ಸರಕಾರದಿಂದ ಅಧಿಕೃತವಾಗಿ ಆಚರಿಸಲು ವಿಶೇಷ ಮುತುವರ್ಜಿ ವಹಿಸಲು ಮನವಿ ಮಾಡಿದರು.

ಕೆ.ಕೆ.ಆರ್ ಡಿ. ಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೆವೋರರವರು ಮಾತನಾಡಿ ರಾಷ್ಟ್ರ ನಿರ್ಮಾಣದ ದೇಶದ ಧೀಮಂತ ನಾಯಕರಾದ ಸರದಾರ ಪಟೇಲರ ಜಯಂತೋತ್ಸವ ಸರಕಾರದಿಂದ ಅಧಿಕೃತವಾಗಿ ಆಚರಿಸಲು ತಾವು ವಿಶೇಷ ಆಸಕ್ತಿ ವಹಿಸುವದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲದೆ ಸರದಾರ ಪಟೇಲ್ ವೃತದ ಆಧುನೀಕರಣದ ಬಗ್ಗೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ಮಾಜಿ ಶಾಸಕರು ಮತ್ತು ಸಮಿತಿಯ ಅಧ್ಯಕ್ಷರಾದ ಶಶೀಲ್ ನಮೋಶಿಯವರು ಮಾತ್ನಾಡಿ ಪಟೇಲ್ ರವರ ಜಯಂತೋತ್ಸವ ಸರಕಾರದಿಂದ ಅಧಿಕೃತವಾಗಿ ಆಚರಣೆ ಅತಿ ಅವಶ್ಯವಾಗಿದೆ,ಇದರಿಂದ ಯುವ ಪೀಳಿಗೆಯಲ್ಲಿ ಇತಿಹಾಸದ ಅರಿವು ಮೂಡಿ ದೇಶ ಅಭಿಮಾನ ಹುಟ್ಟಿತ್ತದೆ ಎಂದರು.

ಈ ಜಯಂತೋತ್ಸವದ ಸಂದರ್ಭದಲ್ಲಿ ಮುಖಂಡರಾದ ಶರಣಕುಮಾರ ಮೋದಿ ಮನೀಷ ಜಾಜು, ನಂದಕುಮಾರ ಪಾಟೀಲ, ಚನ್ನಪ್ಪ, ರಾಘವೇಂದ್ರ ಕುಲಕರ್ಣಿ, ಬಸವರಾಜ, ಶಿವಲಿಂಗಪ್ಪ ಭಂಡಕ,ಭಗವಂತರಾವ ಪಾಟೀಲ, ಬಸವರಾಜ ಅನವರ, ಶಿವಕುಮಾರ ಬಿರಾದಾರ,ಗುರುರಾಜ ಭಂಡಾರಿ, ವೀರೇಶ ಪುರಾಣಿಕ, ಅಸ್ಲಮ್ ಚೌಂಗೆ ,ಸಂಧ್ಯಾರಾಜ ಶ್ಯಾಮಿವೆಲ್, ಪ್ರಥ್ವಿರಾಜ, ಗೌತಮ್, ಸಿದ್ದು,ದೀಪಕ್ ಕುಲಕರ್ಣಿಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here