ಕಲಬುರಗಿ: ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿರುವ ದೇಶದ ಮೋದಲ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ದಿಟ್ಟತನದ ಆಡಳಿತಗಾರ ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರು ತಿಳಿಸಿದರು.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತ್ಯೋತ್ಸವ ಅಂಗವಾಗಿ ಇಂದು ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಪಟೇಲರ ದಿಟ್ಟತನದಿಂದ ನಮ್ಮ ಪ್ರದೇಶ ವಿಮೋಚನೆ ಪಡೆದು,ನಿಜಾಮನ ಕಪಿಮುಷ್ಟಿಯಿಂದ ಬಿಡುಗಡೆ ಆಗಿ ಸ್ವತಂತ್ರವಾಗಿ ಬದುಕಲು ಸಾಧ್ಯವಾಯಿತು ಎಂದರು.
ಕನ್ನಡ ಭೂಮಿ ಜಾಗೃತಿ ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಪದಾಧಿಕಾರಿಗಳಾದ ಪ್ರಶಾಂತ ತಂಬೂರಿ,ಸಾಜೀದ ಅಲಿ ರಂಜೋಳ್ಳ್ವಿ, ಬಾಬಾ ಫಕ್ರುದ್ದೀನ್ ಇತರರು ಇದ್ದರು.