ಶಹಾಬಾದ:ಸ್ಥಳೀಯ ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷರಾಗಿ ಹಾಗೂ ಸಲೀಮಾಬೆಗಂ ಮೆಹಬೂಬ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.
ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷರಾಗಿ ಹಾಗೂ ಸಲೀಮಾಬೆಗಂ ಮೆಹಬೂಬ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರಸಭೆಯ ಹೊರಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ನಗರಸಭೆಯಲ್ಲಿ ಪೂರ್ಣ ಬಹುಮತ ಹೊಂದಿರುವ ಕಾರಣ ನಮ್ಮ ಗೆಲುವು ಖಚಿತ ಎಂಬುದು ಗೊತ್ತಿತ್ತು. ಸದ್ಯ ನೂತನ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ನಗರದ ಅಭಿವೃದ್ಧಿ ಹಾಗೂ ನಗರದ ಸಾರ್ವಜನಿಕರ ಸಮಸ್ಯೆಗಳನ್ನು ಬಗಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಜನರ ನಿರೀಕ್ಷೆಗಳನ್ನು ಮೀರಿ ಉತ್ತಮ ಆಡಳಿತ ನಿಮ್ಮದಾಗಬೇಕು.ಆಗ ಮಾತ್ರ ನಿಮ್ಮ ಮೇಲೆ ಮತ್ತು ಪಕ್ಷದ ಮೇಲೆ ಅಭಿಮಾನ ಮೂಡುತ್ತದೆ.ಆ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ, ಸಂತೋಷ ಪಾಟೀಲ, ಮಜರ್ ಆಲಂಖಾನ, ಚಿತ್ತಾಪೂರ ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್, ಅಜೀತ ಪಾಟೀಲ, ಮೃತ್ಯುಂಜಯ್ ಹಿರೇಮಠ, ಗಿರೀಶ ಕಂಬಾನೂರ, ಹಾಷಮ್ ಖಾನ, ಡಾ.ಜಹೀರ್, ಕಿರಣ ಕೋರೆ,ರಾಜೇಶ ಯನಗುಂಟಿಕರ್, ಸಾಬೇರಾಬೇಗಂ, ನಾಗಣ್ಣ ರಾಂಪೂರೆ, ಅನ್ವರ್ ಪಾಶಾ, ಕುಮಾರ ಚವ್ಹಾಣ, ಸೂರ್ಯಕಾಂತ ಕೋಬಾಳ,ಡಾ.ಅಹ್ಮದ್ ಪಟೇಲ್, ಫಜಲ್ ಪಟೇಲ್, ಸಯ್ಯದ್ ಜಹೀರ್,ಮಹ್ಮದ್ ರಫೀಕ್ ಕಾರೋಬಾರಿ, ಸಾಹೇಬ, ಭರತ್ ರಾಠೋಡ,ರಾಕೇಶ ಪವಾರ, ಶೇರ ಅಲಿ ಮರತೂರ, ಶಕೀಲ ಇಂಗಳಗಿ ಸೇರಿದಂತೆ ಅನೇಕರು ಹಾಜರಿದ್ದರು.