ಶಹಾಬಾದ:ಭಾರತದಂತಹ ಪವಿತ್ರ ದೇಶದ ಘನತೆಯನ್ನು ರಾಮಾಯಣದಂತಹ ಮಹಾಕಾವ್ಯವನ್ನು ಬರೆದು ಹೆಚ್ಚಿಸಿದ ಕೀತರ್ಿ ವಾಲ್ಮೀಕಿಗೆ ಸಲ್ಲುತ್ತದೆ ಎಂದು ಎಸ್.ಜಿ.ವಮರ್ಾ ಹಿಂದಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಚನ್ನಬಸಪ್ಪ ಕೊಲ್ಲೂರ್ ಹೇಳಿದರು.
ಅವರು ಶನಿವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಾಮಾಣಿಕತೆಯಿಂದ ಮನುಷ್ಯ ಮೇಲ್ಮಟ್ಟಕ್ಕೆ ಬೆಳೆಯಬಹುದು ಎಂಬುದನ್ನು ರಾಮಾಯಣದಲ್ಲಿ ಕಾಣಬಹುದು. ಇಂತಹ ಕೃತಿಯ ಮಹತ್ವದ ವಿಚಾರಗಳನ್ನು ಮುಂದಿನ ಪೀಳಿಗೆಗೆ ಮುಟ್ಟಿಸಬೇಕಾದ ಅವಶ್ಯಕತೆಯಿದೆ.ಇಂದು ಯುವಜನಾಂಗ ಅಡ್ಡದಾರಿ ಹಿಡಿಯುತ್ತಿದೆ ಎಂದರು.
ಎಸ್.ಜಿ.ವಮರ್ಾ ಹಿಂದಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನಿತಾ ಶರ್ಮಾ ಮಾತನಾಡಿ, ಹಿರಿಯರು ಮಹಾನ್ ಗ್ರಂಥಗಳಾದ ರಾಮಾಯಣ,ಮಹಾಭಾರತ ಓದಿ ತಿಳಿಸಿದುಕೊಂಡು ತಮ್ಮ ಮಕ್ಕಳಿಗೂ ಅದರ ವಿಚಾರಗಳನ್ನು ತಿಳಿಸಬೇಕು.ಮಹಾನ್ ಪುರುಷರ ಗ್ರಂಥಗಳು ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲವು.ಇಂದಿನ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಮೌಲ್ಯಧಾರಿತವಾಗಿ ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ರಾಮಾಯಣದ ಕೆಲ ಅಂಶಗಳನ್ನು ಪಠ್ಯದಲ್ಲಿ ಅಳವಡಿಸಬೇಕು.ಧರ್ಮದ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.
ಮುಖ್ಯಗುರುಮಾತೆ ದಮಯಂತಿ ಸೂರ್ಯವಂಶಿ, ಶಿರೋಮಣಿ ದಯಾಲ, ಜಗದೇವಿ ಅಗಸ್ತ್ಯತೀರ್ಥ,ಸೌರಭ ವ್ಯಾಸ, ರಮೇಶ ಮಹೀಂದ್ರಕರ್, ವಸಂತ ಪಾಟೀಲ, ಅನೀಲಕುಮಾರ ಕುಲಕರ್ಣಿ, ನೈನಾ ಚಪ್ಪಳಗಾಂವಕರ್, ಕಲಾವತಿ ಇತರರು ಇದ್ದರು.
ಭಂಕೂರ: ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಮುಖ್ಯಗುರು ಶಿವಾಜಿ, ದತ್ತಪ್ಪ ಕೋಟನೂರ್, ಈರಣ್ಣ ಕೆಂಭಾವಿ, ಎಂ.ಡಿ.ಜಕಾತೆ, ವಿಷ್ಣುತೀರ್ಥ ಆಲೂರ, ಸೀತಮ್ಮ.ಎನ್ ಇತರರು ಇದ್ದರು.