ನಿಂಬರ್ಗಾದಲ್ಲಿ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ

0
34

ಆಳಂದ: ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಸರಳವಾಗಿ ಹಾಗೂ ವಿಶೇಷವಾಗಿ ಆಚರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ನಿಂಬರ್ಗಾ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪರಿಸರ ಕಾಳಜಿಯೊಂದಿಗೆ ಸಸಿ ವಿತರಣೆ ಮಾಡಲಾಯಿತು.

Contact Your\'s Advertisement; 9902492681

ಬೇವು,ನೀಲಗಿರಿ,ತುಳಸಿ,ಹುಂಚೆ,ಹೂ ಸಸಿ ಸೇರಿದಂತೆ ಹಲವಾರು ಬಗೆಯ ಸಸಿಗಳನ್ನು ವಿತರಿಸಲಾಯಿತು.
ಬಸವರಾಜ ಯಳಸಂಗಿ ಮಾತನಾಡಿ, ರೈತರು ತಮ್ಮ ಹೊಲಗದ್ದೆಗಳ ಬದು, ಖಾಲಿ ಜಮೀನಿನಲ್ಲಿ ಗಿಡಗಳು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ಎಂದರು.

‘ಪರಿಸರ ಸಂರಕ್ಷಣೆಯು ನಮ್ಮ ಮನೆಯಿಂದ ಆರಂಭವಾಗಬೇಕಿದೆ. ಮನೆಗೊಂದು ಮರ ಘೋಷಣೆಯನ್ನು ಪೂರ್ಣಗೊಳಿಸಲು ಗಿಡಮರ ಬೆಳೆಸುವುದು ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಲ್ಲಿನಾಥ ನಾಟಿಕಾರ, ಮಡಿವಾಳಪ್ಪ ಮಡಿವಾಳ, ಪ್ರವೀಣ್ ಮಿಟೆಕಾರ, ಶ್ರೀಶೈಲ ನಿಗಶೆಟ್ಟಿ, ಅನಿಲ ನಾಗುರ, ಧರ್ಮರಾಯ ವಗ್ದರ್ಗಿ, ಶಿವಕುಮಾರ ಕುಂಭಾರ, ಕ್ಷೇಮಲಿಂಗ ಕಂಭಾರ,ಸಚಿನ್ ಶೀಲವಂತ, ಮಲ್ಲಿನಾಥ ಕೊರೆ,ಅನಿಲಕುಮಾರ ಮಠಪತಿ, ಮಹಾದೇವ ಮಿಟೆಕಾರ,ಸೋನಭಾ ಪಚಂಗೆ,ಈರಣ್ಣ ಶರಣ, ಚಂದ್ರಕಾಂತ ಅವಟೆ,ಅಣ್ಣಾರಾವ ಪಾಟೀಲ್, ಕಲ್ಯಾಣಿ ಪೂಜಾರಿ, ಸಂತೋಷ್ ಕುಮಾರ್ ಹಾಗೂ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here