ಜೇವರ್ಗಿ: ಸಮೀಪದ ಕಟ್ಟಿಸಂಗಾವಿಯ ಶ್ರೀ ಪ್ರಭು ಬಸಯ್ಯ ತಾತನವರ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಯ್ಯ ಸ್ವಾಮಿ ಇವರು ಅಪಾರ ಭಕ್ತ ಸಮೂಹವನ್ನು ಅಗಲಿ ದಿನಾಂಕ 31ರಂದು ಲಿಂಗೈಕ್ಯರಾಗಿದ್ದಾರೆ.
ಶ್ರೀಮಠದಲ್ಲಿ ನಿರಂತರವಾಗಿ ಅನ್ನ ದಾಸೋಹ ಹಾಗೂ ಪಾದಯಾತ್ರಿಗಳಿಗೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಜನರ. ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇವರ ಅಂತ್ಯ ಸಂಸ್ಕಾರ ಶ್ರೀಮಠದಲ್ಲಿ ಇಂದು ಸಾಯಂಕಾಲ ನಡೆಯಲಿದೆ.