ಭಾರತ ದೇಶದ ಕಲೆ ಸಾಹಿತ್ಯ ಸಂಸ್ಕೃತಿಯ ತವರು ಕನ್ನಡ ನಾಡು: ಸುಜಾತಾ ವಿ ಜೇವರ್ಗಿ

0
48

ಸುರಪುರ: ದೇಶದಲ್ಲಿಯೆ ವಿಶಿಷ್ಟವಾದ ಮೆರಗನ್ನು ಹೊಂದಿರುವ ಹಾಗು ದೇಶದ ಕೆಲ ಸಾಹಿತ್ಯ ಮತ್ತು ಸಂಸ್ಕೃತಿಯ ತವರು ಎನಿಸಿಕೊಂಡಿರುವ ಕನ್ನಡ ನಾಡು ನುಡಿಯ ಸೇವೆಗಾಗಿ ಸದಾ ಸಿಧ್ಧರಾಗಿರೋಣ ಎಂದು ನಗರಸಭೆಯ ನೂತನ ಅಧ್ಯಕ್ಷರಾದ ಸುಜಾತಾ ವೆಣುಗೋಪಾಲ ಜೇವರ್ಗಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ೬೫ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ,ಇಂತಹ ಪುಣ್ಯ ಭೂಮಿಯಲ್ಲಿ ನಾವೆಲ್ಲರು ಜನಸಿರುವುದು ನಮ್ಮ ಪುಣ್ಯವಾಗಿದೆ.ಆದ್ದರಿಂದ ನಮ್ಮ ಸೇವೆ ಸದಾ ನಾಡು ನುಡಿಗಾಗಿ ಮೀಸಲಿಡೋಣ ಎಂದರು.

Contact Your\'s Advertisement; 9902492681

ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ,ಸುಮಾರು ಎರಡು ಸಾವಿರದಷ್ಟು ವರ್ಷಗಳ ಭವ್ಯವಾದ ಇತಿಹಾಸವುಳ್ಳ ನಮ್ಮ ಕನ್ನಡ ಭಾಷೆಯು ಇಂದು ಅಪಾಯದಲ್ಲಿದೆ,ಅದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಎರಡು ದಶಕಗಳಿಂದ ನಾಡು ನುಡಿಯ ಸೇವೆಯಲ್ಲಿದ್ದು ನಮ್ಮ ಭಾಷೆ ಕಲೆ ಸಂಸ್ಕೃತಿಯ ಉಳಿವಿಗಾಗಿ ನಾವು ಎಲ್ಲ ಹೋರಾಟಕ್ಕು ಸಿದ್ಧ ಎಂದರು.

ಇದಕ್ಕೂ ಮುನ್ನ ನಗರದ ವಿವಿಧೆಡೆಗಳಲ್ಲಿರುವ ಕನ್ನಡ ಧ್ವಜಾಸ್ಥಂಭಗಳಿಗೆ ಧ್ವಜಾರೋಹಣ ನಡೆಸಿ ನಗರದಲ್ಲಿ ಬೈಕ್ ರ‍್ಯಾಲಿಯ ಮೂಲಕ ಕನ್ನಡ ಜಾಗೃತಿಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ ಶಿವಮೋನಯ್ಯ ಎಲ್.ಡಿ.ನಾಯಕ ಅಂಬ್ಲಯ್ಯ ಬೇಟೆಗಾರ ಹಣಮಗೌಡ ಶಖಾಪುರ ಶ್ರೀನಿವಾಸ ಬೈರಿಮಡ್ಡಿ ಶ್ರೀನಿವಾಸ ಲಕ್ಷ್ಮೀಪುರ ಮಲ್ಲು ವಿಷ್ಣುಸೇನಾ ಆನಂದ ಮಾಚಗುಂಡಾಳ ನಾಗರಾಜ ಡೊಣ್ಣಿಗೇರಾ ಅನಿಲ್ ಬಿರಾದಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here