ಕನ್ನಡಕ ಧರಿಸಿ ಕನ್ನಡ ಹುಡುಕಾಡುವ ಸ್ಥಿತಿ : ಕರವೇ

0
37

ಜೇವರ್ಗಿ : ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿಯ ಜೊತೆ ಕನ್ನಡಿಗರ ಸ್ವಾಭಿಮಾನ ಸದಾಕಾಲ ಹಸಿರಾಗಿರಬೇಕು ಎಂದು ಕನ್ನಡ ರೆಯಾಗದಂತೆ ನೋಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ,ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ, ಇಂಗ್ಲಿಷ್ ಭಾಷೆಯ ವ್ಯಾಮೋಹ ಹಾಗೂ ವ್ಯವಹಾರಿಕ ಲಾಭದ ಉದ್ದೇಶಕ್ಕಾಗಿ ಕನ್ನಡವನ್ನು ಮರೆಮಾಚುತ್ತಿರುವುದು ಸರಿಯಲ್ಲ ಹೀಗೆ ಆದರೆ ಮುಂದೊಂದು ದಿನ ಕನ್ನಡಕ ಹಾಕಿ ಹುಡುಕಿದರೂ ಕನ್ನಡವು ಕಾಣದ ಪರಿಸ್ಥಿತಿ ಎದುರಾಗುತ್ತದೆ ಎಂದು ಹಂಚಿನಾಳ ಗ್ರಾಮ ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅಜಯ್ ಕುಮಾರ್ ಸೊಪ್ಪಿ ತಿಳಿಸಿದರು.

ರಾಜ್ಯೋತ್ಸವದ ಕಾರ್ಯಕ್ರಮ ಹಂಚನಾಳ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಗ್ರಾಮದ ಸಮಸ್ತ ಜನರು ಹಾಗೂ ಸಂಘಟನೆಯ ಕಾರ್ಯದರ್ಶಿ ಪ್ರಕಾಶ್ ನಾಯ್ಕೋಡಿ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಚಿನ್ ಕುಮಾರ್ ಹಿರೇಮಠ ಯುವ ಘಟಕದ ಅಧ್ಯಕ್ಷ ಹೊನ್ನಪ್ಪ ಹೊಸಮನಿ ಹಾಗೂ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here