ಯಾದಗಿರಿ: ಬೈಕ್ ಕಳ್ಳನ ಬಂಧನ: 25 ಬೈಕ್ ಜಪ್ತಿ

0
50

ಯಾದಗಿರಿ: ಹುಣಸಗಿ ಪೊಲೀಸರು ಭರ್ಜರಿ ಬೇಟೆಯಾಡಿ ೨೫ ಬೈಕ್‌ಗಳನ್ನು ಕದ್ದ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ಸಪ್ಟೆಂಬರ್ ತಿಂಗಳಲ್ಲಿ ಎರಡು ಬೈಕ್‌ಗಳು ಕಳ್ಳತನವಾದ ಬಗ್ಗೆ ದೂರು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಯಾದಗಿರಿ ಎಸ್ಪಿ ರುಶಿಕೇಶ ಭಗವಾನ್ ಹಾಗು ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಿಕೊಂಡು ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದರು.

ಹುಣಸಗಿ ಸಿಪಿಐ ದೌಲತ್ ಎನ್.ಕುರಿ ಅವರ ನೇತೃತ್ವದ ತಂಡ ಪಿಎಸ್‌ಐ ಬಾಪುಗೌಡ ಪಾಟೀಲ್ ಅವರು ಕಾರ್ಯಾಚರಣೆ ಆರಂಭಿಸಿ ಇಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Contact Your\'s Advertisement; 9902492681

ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಮೌನೇಶ್ ಎಂಬುವವನೆ ಬಂಧಿತ ಆರೋಪಿಯಾಗಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ರಾಮನಹಳ್ಳಿಯವನಾದ ಮೌನೇಶ ಅಲಿಯಾಸ್ ಪಿಂಟ್ಯಾ ತಂದೆ ಜಗನ್ನಾಥ ಎಂಬುವವನು ಇದುವರೆಗೆ ೨೫ ಬೈಕ್‌ಗಳನ್ನು ಕದ್ದ ಬಗ್ಗೆ ಬಾಯಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮೌನೇಶ ಕದ್ದ ಬೈಕ್‌ಗಳಲ್ಲಿ ೫ ಬೈಕ್‌ಗಳನ್ನು ಬಲಶೆಟ್ಟಿಹಾಳ ಗ್ರಾಮದ ಮನೆಯಲ್ಲಿ ಹಾಗು ಇನ್ನುಳಿದ ೨೦ ಬೈಕ್‌ಗಳನ್ನು ಹುಣಸಗಿ ಮದ್ದಿನ ಮನೆಯ ಹಳೆ ಕಟ್ಟಡವೊಂದರಲ್ಲಿ ಇಟ್ಟಿರುವುದಾಗಿ ಬಾಯಿ ಬಿಟ್ಟಿದ್ದರಿಂದ ಪೊಲೀಸರು ಎಲ್ಲಾ ೨೫ ಬೈಕ್‌ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿಪಿಐ ದೌಲತ್ ಎನ್.ಕುರಿ,ಪಿಎಸ್‌ಐ ಬಾಪುಗೌಡ ಪಾಟೀಲ್ ಹಾಗು ತಂಡದಲ್ಲಿದ್ದ ಎಎಸ್‌ಐ ಹಾಗು ಇತರೆ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ರುಶಿಕೇಶ ಭಗವಾನ್ ಮತ್ತು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ಬಹುಮಾನ ಘೋಷಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here