ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ ಪೊಲೀಸರನ್ನು ಸ್ಮರಿಸಲೇಬೇಕು- ವೆಂಕನಗೌಡ ಪಾಟೀಲ

0
142

ಶಹಾಬಾದ:ಸಮಾಜದಲ್ಲಿ ಶಾಂತಿ ಕಾಪಾಡಲು ಮತ್ತು ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ ಪೊಲೀಸ್ ಯೋಧರನ್ನು ನೆನೆಯುವ ದಿನವೇ ಪೊಲೀಸ್ ಹುತಾತ್ಮ ದಿನ ಎಂದು ಡಿವಾಯ್ಎಸಪಿ ವೆಂಕನಗೌಡ ಪಾಟೀಲ ಹೇಳಿದರು.

ಅವರು ರವಿವಾರ ನಗರದ ಸಹರಾ ಸಭಾಂಗಣದಲ್ಲಿ ನಗರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಲಾದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

1959ರ ಅಕ್ಟೋಬರ್ 21 ರಂದು ಲಡಾಕನಲ್ಲಿ ಕರ್ತವ್ಯ ಪಾಲನೆ ಸಂದರ್ಭದಲ್ಲಿ 10 ಜನ ಪೊಲೀಸರು ಹುತಾತ್ಮರಾದ ದಿನದ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ. ಕೋವಿಡ್ ಹಾಗೂ ನೆರೆ ಪ್ರವಾಹ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವದ ಹಂಗು ತೊರೆದು ತಮ್ಮ ಕರ್ತವ್ಯ ಪಾಲನೆ ಮಾಡಿದ್ದಾರೆ.ಅದರಲ್ಲಿ ಕೆಲವರು ಕೋವಿಡ್ದಿಂದಲೂ ಮರಣನಪ್ಪಿದ್ದಾರೆ. ಸಮಾಜದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಸಾರ್ವಜನಿಕರ ಹಿತಕಾಪಾಡುವ ಪೊಲೀಸ್ ಇಲಾಖೆಯೊಂದಿಗೆ ಕಾನೂನುಪಾಲನೆಗೆ ಅಗತ್ಯ ಸಹಕಾರ ನೀಡಬೇಕೆಂದು ಹೇಳಿದರು.

ಪಿಐ ಅಮರೇಶ.ಬಿ ಮಾತನಾಡಿ, ದೇಶದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮರಾಗಿದ್ದಾರೆ. ಪೊಲೀಸರು ದರೋಡೆ ನಿರ್ಮೂಲನೆ ಕಾರ್ಯಾಚರಣೆ, ಅಪರಾಧ ತನಿಖೆಯ ಸಂದರ್ಭದಲ್ಲಿ, ಅಪರಾಧಿಗಳನ್ನು ಬಂಧಿಸಲು ಪ್ರಯತ್ನಿಸಿದಾಗ, ಕಾನೂನು ಸುವ್ಯವಸ್ಥೆ ಕಾಪಾಡುವಾಗ, ಪ್ರಕೃತಿ ವಿಕೋಪಗಳನ್ನು ಸಂಭವಿಸಿದಾಗ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಮನುಷ್ಯತ್ವವನ್ನು ಹೊಂದಿರುವ ನಾವೆಲ್ಲರೂ ಅವರನ್ನು ಸ್ಮರಿಸಲೇಬೇಕೆಂದು ಹೇಳಿದರು.
ತಹಸೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ವೇದಿಕೆಯ ಮೇಲಿದ್ದರು.

ನಗರ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ , ಕಲಬುರಗಿ ಗ್ರಾಮೀಣ ಕಸಾಪ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್,ಕಸಾಪ ತಾಲೂಕಾಧ್ಯಕ್ಷ ಮೃತ್ಯುಂಜಯ್ ಹಿರೇಮಠ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ, ಶರಣಗೌಡ ಪಾಟೀಲ ಗೋಳಾ(ಕೆ), ಎಪಿಎಂಸಿ ಸದಸ್ಯ ವಿಶ್ವರಾಧ್ಯ ಬೀರಾಳ,ಪೂಜಪ್ಪ ಮೇತ್ರೆ, ಮರಲಿಂಗ ಕಮರಡಗಿ, ಮಲ್ಕಣ್ಣ ಮುದ್ದಾ,ನಾಗಣ್ಣ ರಾಂಪೂರೆ,ದೇವೆಂದ್ರ ಕಾರೊಳ್ಳಿ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here