ಆಧಾರ್ ಕಾರ್ಡ್ ಅವಾಂತರ: 8 ಬಾರಿ ಭಾವಚಿತ್ರ ತೆಗೆದುಕೊಂಡರು ಬಾರದ ಆಧಾರ್ ಕಾರ್ಡ್

0
123

ವಾಡಿ‌: ಪಟ್ಟಣ ರಾವೂರ ಗ್ರಾಮದ ನಿವಾಸಿ ಮಹಿಳೆ ಓರ್ವರು 8 ಬಾರಿ ಆಧಾರ ಕಾರ್ಡ್ ಪಡೆಯಲು ಆಧಾರ್ ಸೆಂಟರ್ ನಲ್ಲಿ ಭಾವ ಚಿತ್ರ ಮತ್ತು ಮಾಹಿತಿ ನೀಡಿ ಆಧಾರ್ ಗಾಗಿ ಅರ್ಜಿ ಸಲ್ಲಿಸಿದರು ಇನ್ನೂ ಆಧಾರ್ ಕಾರ್ಡ್ ಮಾತ್ರ ಬಂದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ, ಸರಕಾರಿ ಸೌಲಭ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಅನುಭವಿಸುವಂತಹದಾಗಿದೆ ಎಂದು ನೊಂದಿದ್ದಾರೆ.

ರಾವೂರ ಗ್ರಾಮದ ಈರಮ್ಮ ಮಲ್ಲಿರ್ಕಾಜುನ ಕೊಳ್ಳಿ ನೊಂದ ಮಹಿಳೆ. 06 ಮೇ 08 ಸೆಪ್ಟೆಂಬರ್ 11 ಡಿಸೆಂಬರ್ 2016. 02 ಫೆಬ್ರವರಿ 03 ಮಾರ್ಚ,01ಅಗಷ್ಟ 2017 ರಿಂದ ಇಲ್ಲಿಯವರೆಗೆ ಆಧಾರಕಾರ್ಡ ಒಪ್ಪಿಗೆಗಾಗಿ ವಾಡಿ ಚಿತ್ತಾಪುರ ಸೇರಿದಂತೆ ಇನ್ನಿತರ ಕಡೆ ಅಲೆದು 8 ಬಾರಿ ಭಾವಚಿತ್ರ ತೆಗೆದುಕೊಂಡರು ಆಧಾರ ಕಾರ್ಡ್ ಸಿಗದೆ ಅರ್ಜಿ ತಿರಸ್ತ್ರ್ಕತಗೊಳ್ಳುತ್ತಿದೆ ಎಂದರು.

Contact Your\'s Advertisement; 9902492681

ಇದರಿಂದ ಈ ಮಹಿಳೆಯ ರೇಷನ್ ಕಾರ್ಡ್, ಉದ್ಯೋಗ ಖಾತ್ರಿ, ಜಾತಿ ಪ್ರಮಾಣ ಪತ್ರ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಲಾಭದಿಂದ ವಂಚಿತ ಆಗಿದ್ದಾಳೆ ಅಲ್ಲದೆ ದಿನನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

ಆಧಾರ್ ಅಧಿಕಾರಿಗಳಿಂದ ಸರಿಯಾದ ಉತ್ತರ ಸಿಗದೆ ಇರುವ ಕಾರಣ ಮಹಿಳೆ ಬೆಸತ್ತಿದ್ದಾಳೆ. ಭಾರತ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ನೊಂದ ಮಹಿಳೆ ಒತ್ತಾಯಿಸಿದ್ದಾರೆ.

ಇಲ್ಲಾವಾದಲ್ಲಿ ನೊಂದ ಮಹಿಳೆ ಯೊಂದಿಗೆ ತಹಸೀಲ ಕಛೇರಿ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಕ್ರಾಂತಿವೀರ ಸಂಗ್ಗೋಳ್ಳಿ ರಾಯಣ್ಣ, ಯುವ ಗರ್ಜನೆ ಸಂಘದ ಅಧ್ಯಕ್ಷರು ಜಗದೇಶ ಪೂಜಾರಿ ರಾವೂರ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here