ಸಾರಿಗೆಯನ್ನು ಹೆಚ್ಚೆಚ್ಚು ಬಳಸಿ ವಾಯುಮಾಲಿನ್ಯ ತಡೆಗಟ್ಟಿ: ಆರ್‌ಟಿಓ ಮಂಜುನಾಥ್‌

0
51

ಬೆಂಗಳೂರು: ಅನಿವಾರ್ಯ ಸಂದರ್ಭಗಳಲ್ಲದೆ ಸಣ್ಣಪುಟ್ಟ ಕೆಲಸಗಳಿಗೂ ಸ್ವಂತ ವಾಹನ ಬಳಸುವ ಬದಲು ಸಮೂಹ ಸಾರಿಗೆಯನ್ನು ಹೆಚ್ಚಾಗಿ ಬಳಸಿದರೆ ಪರಿಸರ ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಯಶವಂತಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಮಂಜುನಾಥ್ ಹೇಳಿದರು.

ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್‌ ಪೂಲಿಂಗ್‌, ಬಸ್, ರೈಲುಗಳಂತಹ ಸಮೂಹ ಸಾರಿಗೆಯನ್ನು ಹೆಚ್ಚು ಬಳಸಬೇಕು. ಸಿಂಗ್ನಲ್‍ಗಳಲ್ಲಿ ಇಂಜಿನ್ ಆಫ್ ಮಾಡಬೇಕು. ವೇಗ ಮಿತಿಯನ್ನು ವೈಜ್ಞಾನಿಕವಾಗಿ ಪಾಲನೆ ಮಾಡಬೇಕು. ಈ ಮೂಲಕ ವಾಯು ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಿಸಬಹುದು ಎಂದರು.

Contact Your\'s Advertisement; 9902492681

ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಾಹನಗಳನ್ನು ಪ್ರಾಮಾಣಿಕವಾಗಿ ತಪಾಸಣೆ ಮಾಡಿ ಮಾಲಿನ್ಯದ ಪ್ರಮಾಣ ಹೆಚ್ಚಿದ್ದರೆ ವಾಹನದ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡುವಂತೆ ಸೂಚನೆ ನೀಡಬೇಕು. ಈ ಮೂಲಕ ವಾಯುಮಾಲಿನ್ಯ ನಿಯಂತ್ರಣಕ್ಕೆ ಅಳಿಲು ಸೇವೆ ಸಲ್ಲಿಸಬೇಕು. ಮರ, ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸಬೇಕು ಎಂದು ಸಾರಿಗೆ ಅಧಿಕಾರಿ ಆರ್‌ ಮಂಜುನಾಥ್‌ ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಬಿತ್ತಿ ಪತ್ರಗಳನ್ನು ಬಿಡಗಡೆ ಮಾಡಿ ಮಾತನಾಡಿ, ಕಾನೂನು ಪಾಲನೆ ಎಲ್ಲರ ಪರಮ ಕರ್ತವ್ಯವಾಗಬೇಕು. ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಧರಿಸುವುದರಿಂದ ವಾಯು ಮಾಲಿನ್ಯದಿಂದ ಉಂಟಾಗುತ್ತಿದ್ದ ಶ್ವಾಸಕೋಶ ಸಂಬಂಧಿಸಿತ ಕಾಯಿಲೆಗಳು ಕಡಿಮೆಯಾಗಿವೆ ಎಂದರು. ಕೊರೊನಾದ ನಂತರವೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.

ಜೀವನವಾಶ್ಯಕವಾಗಿದ್ದ ಗಾಳಿ, ನೀರು ಹೆಚ್ಚು ಮಲೀನಗೊಂಡಿದೆ. ವಾಯು ಮಾಲಿನ್ಯವನ್ನು ತಡೆಯುವುದು ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.

ಮೋಟಾರ್‌ ವಾಹನ ನಿರೀಕ್ಷಕರಾದ ಬಸವರಾಧ್ಯ, ಸ್ಥಾನಿಕ ಸಹಾಯಕರಾದ ಲತಾ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here