ಸುರಪುರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಉಂಟಾಗಿದೆ ತಿಂಗಳಾದರು ಕುಡಿಯಲು ನೀರು ಬರುತ್ತಿಲ್ಲ ಇದರಿಂದಾಗಿ ನಗರದ ಸಾರ್ವಜನಿಕರು ಬೇಸತ್ತಿದ್ದು ಕೂಡಲೆ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಇಂದು ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಹಾಗು ಉಪಾಧ್ಯಕ್ಷ ಮಹೇಶ ಪಾಟೀಲ್ ಅವರಿಹೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಅನ್ವರ ಜಮಾದಾರ ಅವರು ಮಾತನಾಡಿ,ಕಳೆದ ಒಂದು ತಿಂಗಳಿಂದ ನಗರದಲ್ಲಿ ನೀರು ಸರಬರಾಜಿಲ್ಲದೆ ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ.ಆದರೆ ನಗರಸಭೆ ಅಧಿಕಾರಿಗಳು ಜನರ ಸಮಸ್ಯೆಗು ತಮಗೂ ಸಂಬಂಧವೆ ಇಲ್ಲದಂತೆ ವರ್ತಿಸುತ್ತಿದ್ದಾರೆ.ಕೂಡಲೆ ತಾವುಗಳು ಕ್ರಮ ಕೈಗೊಂಡು ಜನರಿಗೆ ಕುಡಿಯುವ ನೀರು ಕಲ್ಪಿಸುವಂತೆ ವಿನಂತಿಸಿದರು.
ಮನವಿ ಸ್ವೀಕರಿಸಿದ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿಯವರು ಮಾತನಾಡಿ,ಕುಡಿಯುವ ನೀರಿನ ಸಮಸ್ಯೆ ನಮ್ಮ ಗಮನಕ್ಕಿದೆ ಕೆಲವು ದಿನಗಳಲ್ಲಿ ನೀರಿನ ಸಮಸ್ಯೆ ಶಾಸ್ವತವಾಗಿ ಪರಿಹಾರವಾಗಲಿದೆ.ಅಲ್ಲಿಯವರೆಗೂ ನಾಗರಿಕರು ಸ್ವಲ್ಪ ಸಹಕರಿಸಬೇಕು ಅಲ್ಲದೆ ಈಗ ತಾತ್ಕಾಲಿಕವಾಗಿ ನಿರಂತರ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹೇಶ ಎಸ್.ಎನ್.ಪಾಟೀಲ್ ಸದಸ್ಯ ಸೋಮನಾಥ ಡೊಣ್ಣಿಗೇರಾ ಮಹಿಬೂಬ ಖುರೇಶಿ ನಗರಸಭೆ ಪೌರಾಯುಕ್ತ ಶಾಂತಪ್ಪ ಹಾಗು ಸಾರ್ವಜನಿಕರಾದ ಶಿವಕುಮಾರ ಸರೋಜ ಬಿಸನಳ್ಳಿ ವಿನೋದಕುಮಾರ ಅಮೃತ ಗೌಸಮಿಯಾ ರಫಿಯದ್ದೀನ್ ಪರಮಣ್ಣ ತಳಗೇರಿ ಸೇರಿದಂತೆ ಅನೇಕರಿದ್ದರು.