ಸುರಪುರ: ನಾಲವಾರದ ಆರಾಧ್ಯ ದೈವವಾದ ಶ್ರೀ ಕೋರಿ ಸಿದ್ದೇಶ್ವರರ ಜನ್ಮಸ್ಥಳವಾದ ನಗರದ ತಿಮ್ಮಾಪುರದಲ್ಲಿ ಶ್ರೀ ಕೋರಿ ಸಿದ್ದೇಶ್ವರರ ಸ್ಮರಣೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜಾ ಕೈಂಕರ್ಯ ನೆರವೇರಿಸಿದ ಆಕಾಶವಾಣಿ ಕಲಾವಿದ ಶರಣು ಕುಮಾರ ಜಾಲಹಳ್ಳಿ ಮಾತನಾಡಿ,ಕಾಖಂಡಕಿಯ ಮಲ್ಲಾರಾಧ್ಯರ ಕೃಪೆಯಿಂದ ನಾಲವಾರದಲ್ಲಿ ನೆಲೆ ನಿಂತಿರುವ ಶ್ರೀ ಕೋರಿ ಸಿದ್ದೇಶ್ವರರು ಶಿವಲಿಂಗಾರ್ಯ ಶಿವದೇವಿಯವರ ಉದರದಲ್ಲಿ ಜನಿಸಿ ಇಂದು ಲೋಕ ಪೂಜಿತರಾಗಿದ್ದಾರೆ.ಅಂತಹ ಮಹಾತ್ಮ ಕೋರಿಸಿದ್ದೇಶ್ವರರು ಜನಸಿದ ಈ ಪುಣ್ಯ ನೆಲದಲ್ಲಿ ನಾವೆಲ್ಲರು ಜನಿಸಿರುವುದು ಮಹಾನ್ ಪುಣ್ಯವಾಗಿದೆ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ಪ್ರತಿ ವರ್ಷವು ನಡೆಯುವ ಶ್ರೀ ಕೋರಿ ಸಿದ್ದೇಶ್ವರರ ಈ ಪುಣ್ಯ ಸ್ಮರಣೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಈ ಭಾಗದ ಜನರು ಪುನಿತರಾಗುತ್ತಿದ್ದಾರೆ.ಇಂತಹ ಸುದಿನದಲ್ಲಿ ಪಾಲ್ಗೊಳ್ಳುವ ನಾವೆಲ್ಲರು ಧನ್ಯರು,ನಮಗೆ ಸದಾಕಾಲ ಶ್ರೀ ಕೋರಿಸಿದ್ದೇಶ್ವರರ ಆಶಿರ್ವಾದ ಲಭಿಸುತ್ತಿರಲೆಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ವಾರದ ಕುಟುಂಬದಿಂದ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮವನ್ನು ಗಾಯಕ ಶರಣು ಕುಮಾರ ಜಾಲಹಳ್ಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು ನಂತರ ಪ್ರಸಾದ ವಿತರಣೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಅಂಬರೀಶ ಕುಂಬಾರ ಚೆನ್ನಣ್ಣ ಎಲಿಗಾರ ವೀರಭದ್ರಪ್ಪ ಕುಂಬಾರ ಯಂಕಪ್ಪ ಸಂಜೀವರಡ್ಡಿ ಚೆನ್ನಪ್ಪ ಆಲ್ದಾಳ ಗುರುಲಿಂಗಯ್ಯ ಸ್ವಾಮಿ ನಾಗಯ್ಯ ಹಿರೇಮಠ ಸಾಯಬಣ್ಣ ಹೆಳವರ ರಜತ್‌ಗೌಡ ಇತರರಿದ್ದರು.